ರಶ್ಯ ವಿಮಾನಗಳಿಂದ ಬಾಂಬ್ ದಾಳಿ: 20 ಮಂದಿ ಸಾವು

Update: 2018-01-04 17:43 GMT

ಡಮಾಸ್ಕಸ್ (ಸಿರಿಯ), ಜ. 4: ಶಂಕಿತ ರಶ್ಯ ಯುದ್ಧ ವಿಮಾನಗಳು ಸಿರಿಯ ರಾಜಧಾನಿ ಡಮಾಸ್ಕಸ್‌ನ ಪೂರ್ವದಲ್ಲಿರುವ ಬಂಡುಕೋರರ ನಿಯಂತ್ರಣದ ಸ್ಥಳವೊಂದರ ಮೇಲೆ ಗುರುವಾರ ಮುಂಜಾನೆ ನಡೆಸಿದ ಬಾಂಬ್ ದಾಳಿಗಳಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ಗಾಯಗೊಂಡಿದ್ದಾರೆ.

ರಶ್ಯದ್ದೆಂದು ಹೇಳಲಾದ ಯುದ್ಧ ವಿಮಾನಗಳು ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶದ ಎರಡು ಜನವಸತಿ ಕಟ್ಟಡಗಳ ಮೇಲೆ ಬಾಂಬ್‌ಗಳನ್ನು ಸುರಿಸಿದವು.

ಮಿಸ್ರಬ ಪಟ್ಟಣದಲ್ಲಿ ಕನಿಷ್ಠ 4 ಬಾಂಬ್‌ಗಳು ಈ ಎರಡು ಜನವಸತಿ ಕಟ್ಟಡಗಳನ್ನು ಧ್ವಂಸಗೊಳಿಸಿದವು.

ಬಾಂಬ್ ದಾಳಿಗಳಲ್ಲಿ ಮೃತಪಟ್ಟವರಲ್ಲಿ 11 ಮಹಿಳೆಯರು ಮತ್ತು ಒಂದು ಮಗು ಸೇರಿದೆ ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News