×
Ad

ಪಾಕಿಸ್ತಾನದ ಎರಡು ಸೇನಾ ಠಾಣೆ ಧ್ವಂಸ

Update: 2018-01-04 23:26 IST

ಜಮ್ಮು, ಜ. 4: ಜಮ್ಮು ಕಾಶ್ಮೀರ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ವಿಫಲಗೊಳಿಸಿರುವ ಗಡಿ ಭದ್ರತಾ ಪಡೆ ಓರ್ವನನ್ನು ಹತ್ಯೆಗೈದಿದೆ.

 ಅರ್ನೆಯಾ ವಲಯದ ನಿಕೋವಲ್ ಗಡಿ ಹೊರಠಾಣೆಯ ಸಮೀಪ ಅಂತಾರಾಷ್ಟ್ರೀಯ ಗಡಿಗುಂಟ ಜನರ ಚಲನವಲನವನ್ನು ಬಿಎಸ್‌ಎಫ್ ಗಮನಿಸುತ್ತಿತ್ತು. ಕೆಲವರು ನುಸುಳುವುದು ಕಂಡಾಗ ಗುಂಡು ಹಾರಿಸಿತು. ಇದರಿಂದ ಓರ್ವ ನುಸುಳುಕೋರ ಮೃತಪಟ್ಟಿದ್ದಾನೆ. ಇನ್ನೋರ್ವ ಪರಾರಿಯಾಗಿದ್ದಾನೆ ಎಂದು ಜಮ್ಮ ಫ್ರಂಟಿಯರ್‌ನ ಐಜಿ ರಾಮ್ ಅವತಾರ್ ಹೇಳಿದ್ದಾರೆ.

  ಅಪ್ರಚೋದಿದ ಗುಂಡಿನ ದಾಳಿ ನಡೆಸಿ ಯೋಧನೋರ್ವನನ್ನು ಹತ್ಯೆಗೈದಿರುವುದಕ್ಕೆ ಪ್ರತೀಕಾರವಾಗಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಎರಡು ಠಾಣೆಗಳನ್ನು ಧ್ವಂಸಗೊಳಿಸಿದೆ. ಪಾಕಿಸ್ತಾನದ ಎರಡು ಮೋರ್ಟಾರ್‌ಗಳನ್ನು ಪತ್ತೆ ಹಚ್ಚಲಾಗಿದೆ ಹಾಗೂ ನಾಶಗೊಳಿಸಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News