ವೆನ್ನಿಸ್ ವಸ್ತುಪ್ರದರ್ಶನದಲ್ಲಿ ಭಾರತದ ಆಭರಣ ಕಳವು

Update: 2018-01-05 04:49 GMT

ರೋಮ್, ಜ. 5: ವೆನ್ನಿಸ್ ಅರಮನೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದ ಭಾರತದ ಪ್ರಮುಖ ಎ1 ಥಾನಿ ಕಲೆಕ್ಷನ್‌ನಿಂದ ಅಮೂಲ್ಯ ಚಿನ್ನಾಭರಣಗಳನ್ನು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಸ್ತುಪ್ರದರ್ಶನದ ಕೊನೆಯ ದಿನ ಕಿವಿಯ ರಿಂಗ್ ಹಾಗೂ ಪದಕದ ಕೊಂಡಿಯನ್ನು ಕಳವು ಮಾಡಲಾಗಿದೆ. ಇದು ಮೊಘಲ್ ಸಾಮ್ರಾಜ್ಯದ ಕಾಲದಿಂದ ಬಂದಿದ್ದ ಅಮೂಲ್ಯ ಹರಳುಗಳನ್ನು ಒಳಗೊಂಡ ಆಭರಣಗಳಾಗಿವೆ. ಇದು ಚಿನ್ನ, ಪ್ಲಾಟಿನಂ ಹಗೂ ವಜ್ರದಿಂದ ಮಾಡಲ್ಪಟ್ಟದ್ದು ಹಾಗೂ ಇದರ ಮೌಲ್ಯ ಸುಮಾರು 10 ಲಕ್ಷ ಯೂರೊ ಎಂದು ಅಂದಾಜು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವೆನಿಸ್ ಡೋಜೆ ಅರಮನೆಯ ಭದ್ರತಾ ಅಲರಾಂ ಮುಂಜಾಣೆ 10 ಗಂಟೆ ವೇಳೆಗೆ ಆಫ್ ಆಗಿತ್ತು. ತಕ್ಷಣ ಪೊಲೀಸರು ಈ ಪ್ರದೇಶವನ್ನು ಸುತ್ತುವರಿದಿದ್ದಾರೆ. ಆದರೆ ಕಳ್ಳರು ಆ ವೇಳೆಗಾಗಲೇ ಮ್ಯೂಸಿಯಂನಿಂದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಭದ್ರತಾ ಅಲರಾಂ ತಡವಾಗಿ ಮೊಳಗುವಂತೆ ಕಳ್ಳರು ಕೈಚಳಕ ತೋರಿರುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎ1 ಥಾನಿ ಕಲೆಕ್ಷನ್‌ನಲ್ಲಿ 270 ಭಾರತೀಯ ಹಾಗೂ ಭಾರತದಿಂದ ಸ್ಫೂರ್ತಿ ಪಡೆದ ಆಭರಣಗಳನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ಸರಿಸಾಟಿಯಾದ ಯಾವುದೇ ಆಭರಣ ಇಲ್ಲ ಎಂದು ಫೋರ್ಬ್ಸ್ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News