ಎಷ್ಟೇ ದೊಡ್ಡ ಅಪಾಯದಲ್ಲಿದ್ದರೂ ನಿಮ್ಮನ್ನು ರಕ್ಷಿಸಬಹುದು ಈ ಪುಟ್ಟ ಸಾಧನ

Update: 2018-01-06 13:13 GMT

ಶೇ.35ರಷ್ಟು ಮಹಿಳೆಯರು ತಮ್ಮ ಜೀವಮಾನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಹಲ್ಲೆಗೆ ಗುರಿಯಾಗುತ್ತಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ. ಹರ್ಯಾಣದ ಗುರ್ಗಾಂವ್‌ನ ಈ ತಾಯಿ-ಮಗಳ ಜೋಡಿ ತಮ್ಮ ಆವಿಷ್ಕಾರ ‘ಡ್ಯಾಝ್ಲಾ’ನೊಂದಿಗೆ ಈ ಸಂಖ್ಯೆಯನ್ನು ತಗ್ಗಿಸುವ ಆಶಯ ಹೊಂದಿದ್ದಾರೆ.

ಅದಿತಿ ಛಡ್ಡಾ ಮತ್ತು ಅನು ಛಡ್ಡಾ ಅವರು ಸೃಷ್ಟಿಸಿರುವ ಡ್ಯಾಝ್ಲಾ ಮಹಿಳೆಯರಿಗೆ ಬೆದರಿಕೆಗಳು ಎದುರಾದರೆ ಅವರು 2-3 ಜನರಿಗೆ ಎಸ್‌ಒಎಸ್ ಎಚ್ಚರಿಕೆಗಳನ್ನು ರವಾನಿಸಲು ಅವಕಾಶ ಕಲ್ಪಿಸುತ್ತದೆ. ಸಾಧನದಲ್ಲಿಯ ಪುಟ್ಟ ಬಟನ್‌ವೊಂದನ್ನು ಮೂರು ಸೆಕೆಂಡ್‌ಗಳ ಕಾಲ ಒತ್ತಿ ಹಿಡಿದರೆ ಸಂದೇಶ ರವಾನೆಯಾಗುತ್ತದೆ ಮತ್ತು ಆಪತ್ತಿಗೆ ಸಿಲುಕಿರುವ ಮಹಿಳೆಯು ಇರುವ ತಾಣದ ವಿವರಗಳನ್ನೂ ನೀಡುತ್ತದೆ.

ಎಸ್‌ಒಎಸ್ ಅಲರ್ಟ್‌ಗಳನ್ನು ಕಳುಹಿಸುವ ಜೊತೆಗೆ ಬಟನ್ ಒತ್ತುವುದರಿಂದ ಈ ಸಾಧನವು ಜೋರಾಗಿ ಶಬ್ಧವನ್ನೂ ಮೊಳಗಿಸುತ್ತದೆ ಮತ್ತು ಜನರ ಗಮನವನ್ನು ಸೆಳೆದು ಸಂಭಾವ್ಯ ಹಲ್ಲೆಕೋರ ಹಿಂಜರಿಯುವಂತೆ ಮಾಡುತ್ತದೆ.

ಬಳಕೆದಾರರ ಹಲವಾರು ಅಗತ್ಯಗಳನ್ನು ಪೂರೈಸುವ ಇತರ ಸೌಲಭ್ಯಗಳನ್ನೂ ಡ್ಯಾಝ್ಲಾ ಹೊಂದಿದೆ. ಸಾಧನದ ಬಟನ್‌ವೊಂದನ್ನು ಒತ್ತಿದರೆ ನೀವು ಸುರಕ್ಷಿತವಾಗಿ ಬರುತ್ತಿದ್ದೀರಿ ಎಂಬ ಸಂದೇಶವು ನಿಮ್ಮ ಪ್ರೀತಿಪಾತ್ರರಿಗೆ ರವಾನೆಯಾಗುತ್ತದೆ. ನೀವು ನಿಮ್ಮ ಮೊಬೈಲ್‌ನಲ್ಲಿ ಸಂದೇಶವನ್ನು ಟೈಪ್ ಮಾಡುವ ತೊಂದರೆಯನ್ನು ತೆಗೆದುಕೊಳ್ಳಬೇಕಿಲ್ಲ.

ಆದರೆ ‘ಡ್ಯಾಝ್ಲಾ’ ಮಹಿಳೆಯರ ಸುರಕ್ಷತೆಗಾಗಿ ಬಂದಿರುವ ಇಂತಹ ಮೊದಲ ಸಾಧನವೇನಲ್ಲ. ಮಾರುಕಟ್ಟೆಯಲ್ಲಿ ಪೆಪ್ಪರ್ ಸ್ಪ್ರೇ, ಮಹಿಳೆಯರ ಸುರಕ್ಷತೆಗಾಗಿ ಆ್ಯಪ್‌ಗಳು ಇತ್ಯಾದಿ ಲಭ್ಯವಿವೆ. ಆದರೆ ಡ್ಯಾಝ್ಲಾ ಪೈಪೋಟಿಯಲ್ಲಿ ಗೆಲ್ಲುತ್ತದೆ ಎನ್ನುವುದು ಛಡ್ಡಾಗಳ ವಿಶ್ವಾಸವಾಗಿದೆ.

ಡ್ಯಾಝ್ಲಾ ಒಮ್ಮೆ ಚಾರ್ಜ್ ಮಾಡಿದರೆ 45 ದಿನಗಳ ಸ್ಟಾಂಡ್‌ಬೈ ಜೊತೆಗೆ ಅದ್ಭುತ ಬ್ಯಾಟರಿ ಲೈಫ್ ಹೊಂದಿದೆ. ಇದು ಡ್ಯಾಝ್ಲಾನ ವಿಶೇಷತೆ ಎನ್ನುತ್ತಾರೆ ಅವರು.

ಚಾವಿ ಇತ್ಯಾದಿಗಳಂತಹ ಕಳೆದುಹೋಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವ ವಿಶಿಷ್ಟ ಸೌಲಭ್ಯವನ್ನೂ ಡ್ಯಾಝ್ಲಾ ಹೊಂದಿದೆ. ಅಲ್ಲದೆ ಫೋನ್ ಕರೆಗಳು, ಸಂದೇಶಗಳು ಮತ್ತು ಇ-ಮೇಲ್‌ನಂತಹ ಮಹತ್ವದ ದೈನಂದಿನ ನೋಟಿಫಿಕೇಶನ್‌ಗಳನ್ನೂ ಅದು 1ರವಾನಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News