ಬಾಂಗ್ಲಾದೇಶಿ-ರೊಹಿಂಗ್ಯಾ ನಡುವೆ ಮದುವೆ ನಿಷೇಧ ಊರ್ಜಿತ
Update: 2018-01-09 22:18 IST
ಢಾಕಾ, ಜ. 9: ಬಾಂಗ್ಲಾದೇಶದ ಪ್ರಜೆಗಳು ಮತ್ತು ದೇಶದಲ್ಲಿ ಆಶ್ರಯ ಪಡೆದಿರುವ ಮ್ಯಾನ್ಮಾರ್‌ನ ರೊಹಿಂಗ್ಯಾ ನಿರಾಶ್ರಿತರ ನಡುವಿನ ಮದುವೆಯನ್ನು ನಿಷೇಧಿಸಿ ಬಾಂಗ್ಲಾದೇಶ ಸರಕಾರ ಹೊರಡಿಸಿದ್ದ ಆದೇಶವನ್ನು ಇಲ್ಲಿನ ನ್ಯಾಯಾಲಯವೊಂದು ಎತ್ತಿ ಹಿಡಿದಿದೆ.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು ರೊಹಿಂಗ್ಯಾ ಹುಡುಗಿಯನ್ನು ಮದುವೆಯಾಗಿದ್ದರು.
ಸರಕಾರದ ಆದೇಶವನ್ನು ಪ್ರಶ್ನಿಸಿ ವರನ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಢಾಕಾ ಹೈಕೋರ್ಟ್ ತಳ್ಳಿಹಾಕಿದೆ.
ಎರಡು ಸಮುದಾಯಗಳ ನಡುವಿನ ಮದುವೆಯನ್ನು ಬಾಂಗ್ಲಾದೇಶ ಸರಕಾರ 2014ರಲ್ಲಿ ನಿಷೇಧಿಸಿತ್ತು. ರೊಹಿಂಗ್ಯಾ ನಿರಾಶ್ರಿತರು ಮದುವೆ ಮೂಲಕ ಬಾಂಗ್ಲಾದೇಶದ ನಾಗರಿಕತ್ವ ಪಡೆಯುವುದನ್ನು ತಡೆಯಲು ಸರಕಾರ ಈ ಕ್ರಮ ತೆಗೆದುಕೊಂಡಿದೆ.