ಇಸ್ರೇಲ್‌ನಿಂದ ವಾಯು ದಾಳಿ: ಸಿರಿಯ ಆರೋಪ
ಡಮಾಸ್ಕಸ್, ಜ. 9: ಇಸ್ರೇಲ್ ಸೇನೆಯು ಸೋಮವಾರ ರಾತ್ರಿ ಸಿರಿಯದ ಹಲವು ಭಾಗಗಳ ಮೇಲೆ ವಾಯು ದಾಳಿಗಳನ್ನು ನಡೆಸಿದೆ ಹಾಗೂ ರಾಕೆಟ್‌ಗಳನ್ನು ಹಾರಿಸಿದೆ ಎಂದು ಸಿರಿಯ ಸೇನೆ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇಸ್ರೇಲ್ ದಾಳಿಯಲ್ಲಿ ಸೇನಾ ನೆಲೆಯೊಂದರ ಸಮೀಪ ಹಾನಿಯುಂಟಾಗಿದೆ.
ರಾಜಧಾನಿ ಡಮಾಸ್ಕಸ್‌ನ ಈಶಾನ್ಯದಲ್ಲಿರುವ ಕುಟೇಫೇ ಮೇಲೆ ವಾಯು ದಾಳಿಗಳನ್ನು ನಡೆಸಿದ ಇಸ್ರೇಲ್ ವಾಯು ಪಡೆ, ಸೇನಾ ನೆಲೆಯೊಂದರ ಸಮೀಪದ ಸ್ಥಳಕ್ಕೆ ಹಾನಿಯುಂಟು ಮಾಡಿದೆ.
ಸಿರಿಯ ಸೇನೆ ಪ್ರತಿದಾಳಿ ನಡೆಸಿದ್ದು, ಇಸ್ರೇಲ್‌ನ ಒಂದು ಯುದ್ಧ ವಿಮಾನಕ್ಕೆ ಹಾನಿಯಾಗಿದೆ ಎಂದು ಸಿರಿಯ ಸೇನೆ ಹೇಳಿದೆ.
ಇಸ್ರೇಲ್-ಆಕ್ರಮಿತ ಗೋಲನ್ ಹೈಟ್ಸ್‌ನಿಂದ ಸಿರಿಯದ ಮೇಲೆ ನೆಲದಿಂದ ನೆಲಕ್ಕೆ ಹಾರುವ ಕ್ಷಿಪಣಿಗಳನ್ನೂ ಹಾರಿಸಿದೆ, ಆದರೆ ಅದನ್ನು ಸಿರಿಯ ಸೇನೆ ತಡೆಗಟ್ಟಿದೆ ಎಂದಿದೆ.
1967ರಲ್ಲಿ ನಡೆದ 6 ದಿನಗಳ ಯುದ್ಧದ ವೇಳೆ, ಇಸ್ರೇಲ್ ಸಿರಿಯದ ಗೋಲನ್ ಹೈಟ್ಸ್‌ನಿಂದ 1,200 ಚದರ ಕಿ.ಮೀ. ಸ್ಥಳವನ್ನು ಆಕ್ರಮಿಸಿತ್ತು. ಬಳಿಕ ಅದನ್ನು ತನ್ನ ದೇಶಕ್ಕೆ ಸೇರಿಸಿಕೊಂಡಿತು. ಆದರೆ, ಅದನ್ನು ಅಂತಾರಾಷ್ಟ್ರೀಯ ಸಮುದಾಯ ಅಂಗೀಕರಿಸಿಲ್ಲ.