ಜ. 10ರಂದು ವಿಜಯ ಮಲ್ಯ ವಿಚಾರಣೆ ಪುನಾರಂಭ
Update: 2018-01-09 22:52 IST
ಲಂಡನ್, ಜ. 9: ಭಾರತೀಯ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ವಿಚಾರಣೆ ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬುಧವಾರ ಪುನಾರಂಭಗೊಳ್ಳಲಿದೆ.
ಡಿಸೆಂಬರ್ 14ರಂದು ನಡೆದ ಹಿಂದಿನ ವಿಚಾರಣೆಯಲ್ಲಿ, ಮುಂಬೈ ಆರ್ಥರ್ ರೋಡ್ ಜೈಲಿನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸುವಂತೆ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬತ್‌ನಾಟ್ ಪ್ರಾಸಿಕ್ಯೂಶನ್‌ಗೆ ಸೂಚನೆ ನೀಡಿದ್ದರು.
ಮಲ್ಯ ಗಡಿಪಾರುಗೊಂಡರೆ ಅವರನ್ನು ಈ ಜೈಲಿನಲ್ಲಿ ಇಡಲಾಗುತ್ತದೆ.
ನ್ಯಾಯಾಧೀಶರು ಕೇಳಿರುವ ಮಾಹಿತಿಯನ್ನು ಬುಧವಾರದ ಒಳಗೆ ನೀಡಲಾಗುವುದು ಎಂಬುದಾಗಿ ಭಾರತ ಸರಕಾರವನ್ನು ಪ್ರತಿನಿಧಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.