ವಿದೇಶದಲ್ಲಿ 50ನೇ ವಿಕೆಟ್ ಪಡೆದ ಶಮಿ

Update: 2018-01-09 18:59 GMT

ಕೇಪ್‌ಟೌನ್, ಜ.9: ಭಾರತದ ವೇಗಿ ಮುಹಮ್ಮದ್ ಶಮಿ ಅವರು ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಕ್ರಿಕೆಟ್‌ನಲ್ಲಿ ಸೋಮವಾರ ಕಾಗಿಸೊ ರಬಾಡ ಅವರನ್ನು ಔಟ್ ಮಾಡುವ ಮೂಲಕ ಭಾರತ ಉಪಖಂಡದ ಹೊರಗೆ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 50ಕ್ಕೆ ಏರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿರುವ ಶಮಿ ಅವರು ಇದೀಗ ವಿದೇಶದಲ್ಲಿ 50ಹಾಗೂ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿರುವ ಭಾರತದ ಬೌಲರ್‌ಗಳ ಪೈಕಿ 14ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಉಪಖಂಡದ ಹೊರಗೆ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್‌ಗಳ ವಿವರ ಇಂತಿವೆ

ಅನಿಲ್ ಕುಂಬ್ಳೆ(200), ಕಪಿಲ್ ದೇವ್(155), ಝಹೀರ್ ಖಾನ್(147), ಬಿ.ಎಸ್.ಬೇಡಿ (123), ಹರ್ಭಜನ್ ಸಿಂಗ್(117), ಜೆ.ಶ್ರೀನಾಥ್(117), ಇಶಾಂತ್ ಶರ್ಮಾ(110), ಬಿ.ಎಸ್.ಚಂದ್ರಶೇಖರ್(92), ಇ.ಎಸ್.ಪ್ರಸನ್ನ(92), ರವಿ ಶಾಸ್ತ್ರಿ(65), ವೆಂಕಟ್‌ರಾಘವನ್(62), ವೆಂಕಟೇಶ್ ಪ್ರಸಾದ್(55), ಎಸ್.ಶ್ರೀಶಾಂತ್(54) ಮತ್ತು ಮುಹಮ್ಮದ್ ಶಮಿ(50).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News