ಕ್ಯಾಲಿಫೋರ್ನಿಯದಲ್ಲಿ ಭೂಕುಸಿತ: ಕನಿಷ್ಠ 13 ಸಾವು
Update: 2018-01-10 23:25 IST
ಲಾಸ್ ಏಂಜಲಿಸ್, ಜ. 10: ದಕ್ಷಿಣ ಕ್ಯಾಲಿಫೋರ್ನಿಯದ ಪೆಸಿಫಿಕ್ ಕರಾವಳಿಯ ಸಾಂಟಾ ಬಾರ್ಬರಾದಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸಾವಿರಾರು ನಿವಾಸಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, 10-15 ಶೇ. ಮಂದಿ ಮಾತ್ರ ಈ ಸೂಚನೆ ಪಾಲಿಸಿದ್ದರು.
ಇದಾದ ಬಳಿಕ ಮಂಗಳವಾರ ಮುಂಜಾನೆ ಭಾರೀ ಮಳೆ ಸುರಿಯಿತು ಹಾಗೂ ಭೀಕರ ಭೂಕುಸಿತ ಸಂಭವಿಸಿದೆ.