ಐರ್ಲೆಂಡ್ ವಿರುದ್ಧ 2 ಟ್ವೆಂಟಿ-20 ಪಂದ್ಯ ಆಡಲಿರುವ ಭಾರತ

Update: 2018-01-10 18:56 GMT

ಹೊಸದಿಲ್ಲಿ, ಜ.10: ಟೀಮ್ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್‌ಗೆ ಕ್ರಿಕೆಟ್ ಪ್ರವಾಸ ಕೈಗೊಳ್ಳುವ ಮೊದಲು ಎರಡು ಪಂದ್ಯಗಳ ಟ್ವೆಂಟಿ-20 ಸರಣಿ ಆಡಲು ಐರ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.

ಭಾರತ-ಐರ್ಲೆಂಡ್ ನಡುವೆ 2 ಪಂದ್ಯಗಳ ಟ್ವೆಂಟಿ-20 ಸರಣಿಯು ಡಬ್ಲಿನ್‌ನಲ್ಲಿ ಜೂ.27 ಹಾಗೂ 29 ರಂದು ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News