ಬಿಎಫ್‌ಐ ಕೌನ್ಸಿಲ್ ಪ್ರತಿನಿಧಿಯಾಗಿ ಸರಿತಾದೇವಿ

Update: 2018-01-10 19:02 GMT

ಹೊಸದಿಲ್ಲಿ, ಜ.10: ಮಾಜಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಎಲ್. ಸರಿತಾದೇವಿ ರಾಷ್ಟ್ರೀಯ ಬಾಕ್ಸಿಂಗ್ ಫೆಡರೇಶನ್‌ನ (ಬಿಎಫ್‌ಐ)ಕಾರ್ಯಕಾರಿಣಿ ಸಭೆಗೆ ಮಹಿಳಾ ಬಾಕ್ಸರ್‌ಗಳ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ರೋಹ್ಟಕ್‌ನ ನ್ಯಾಶನಲ್ ಚಾಂಪಿಯನ್‌ಶಿಪ್ ವೇಳೆ ನಡೆದ ಮತದಾನದಲ್ಲಿ 31 ತಂಡಗಳ ನಾಯಕರ ಪೈಕಿ 22 ಮಂದಿ ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಸರಿತಾರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಮತದಾನದಲ್ಲಿ ಸರಿತಾ ವಿರುದ್ಧ ಸೀಮಾ ಪೂನಿಯಾ ಸ್ಪರ್ಧಿಸಿದ್ದರು.

‘‘ಮಹಿಳಾ ಬಾಕ್ಸರ್‌ಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವೆ. ಏಕೆಂದರೆ ನನಗೆ ಸಮಸ್ಯೆಯ ಅರಿವು ಚೆನ್ನಾಗಿದೆ. ನಾನು ಹಿರಿಯ ಬಾಕ್ಸರ್ ಆಗಿರುವ ಕಾರಣ 2 ದಿನಗಳ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೆ. ಮಹಿಳೆಯರ ಸಮಸ್ಯೆಗೆ ಸ್ಪಂದಿಸುವುದು ನನಗೆ ಅತ್ಯಂತ ಮುಖ್ಯವಾಗಿದೆ’’ ಎಂದು ಸರಿತಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News