ಅಂಡರ್-19 ವಿಶ್ವಕಪ್ ತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ದ್ರಾವಿಡ್

Update: 2018-01-11 19:07 GMT

ಹ್ಯಾಮಿಲ್ಟನ್, ಜ.11: ಭಾರತೀಯ ಕ್ರಿಕೆಟ್‌ನ ‘ಮಹಾಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಗುರುವಾರ 45ನೇ ವಸಂತಕ್ಕೆ ಕಾಲಿಟ್ಟರು. ಹುಟ್ಟುಹಬ್ಬವನ್ನು ತನ್ನದೇ ಶೈಲಿಯಲ್ಲಿ ಆಚರಿಸಿಕೊಂಡರು.

  ಪ್ರಸ್ತುತ ಭಾರತದ ಅಂಡರ್-19 ಕ್ರಿಕೆಟ್ ತಂಡದೊಂದಿಗೆ ನ್ಯೂಝಿಲೆಂಡ್‌ನಲ್ಲಿರುವ ದ್ರಾವಿಡ್ ಅಲ್ಲಿಯೇ ಆಟಗಾರರ ಜೊತೆ ಹುಟ್ಟುಹಬ್ಬವನ್ನು ಆಚರಿಸಿದರು. ಆಟಗಾರರು ತಮ್ಮ ಕೋಚ್‌ನ ಜನ್ಮದಿನವನ್ನು ಸ್ಮರಣೀಯವಾಗಿಸಿದರು. ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ದ್ರಾವಿಡ್ ಅವರು ಕಿರಿಯ ಆಟಗಾರರೊಂದಿಗೆ ಬರ್ತ್ ಡೇ ಕೇಕ್‌ನ್ನು ಕಟ್ ಮಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಆಟಗಾರರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕೇಕ್ ಕತ್ತರಿಸಿದ ಬಳಿಕ ಆಟಗಾರರು ದ್ರಾವಿಡ್ ಮುಖ ಹಾಗೂ ಬಟ್ಟೆಗೆ ಕೇಕ್‌ನ್ನು ಹಚ್ಚಿದರು. ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ದ್ರಾವಿಡ್ ಭಾರತದ ಜೂನಿಯರ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಭಾರತದ ಪರ 164 ಟೆಸ್ಟ್ ಪಂದ್ಯಗಳನ್ನು ಆಡಿರುವ ದ್ರಾವಿಡ್ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News