ಇನ್ನು ಮುಂದೆ ಇಲ್ಲಿನ ಮಹಿಳೆಯರು ಮದ್ಯ ಖರೀದಿಸುವಂತಿಲ್ಲ!
Update: 2018-01-15 22:21 IST
ಕೊಲಂಬೋ, ಜ.15: ಮಹಿಳೆಯರು ಮದ್ಯ ಖರೀದಿಸದಂತೆ ಹೇರಲಾಗಿದ್ದ ನಿರ್ಬಂಧವನ್ನು ಹಣಕಾಸು ಸಚಿವಾಲಯವು ಹಿಂತೆಗೆದ ಕೆಲವೇ ದಿನಗಳಲ್ಲಿ ಶ್ರೀಲಂಕಾ ಅಧ್ಯಕ್ಷರು ಮತ್ತೊಮ್ಮೆ ಮಹಿಳೆಯರ ಮದ್ಯ ಖರೀದಿಗೆ ನಿರ್ಬಂಧ ಹೇರಿದ್ದಾರೆ.
“1979ರ ಮಹಿಳೆಯರಿಗೆ ಯಾವುದೇ ವಿಧದ ಮದ್ಯ ಮಾರಾಟನ್ನು ನಿಷೇಧಿಸುವ ಕಾಯ್ದೆಯನ್ನು ಕಳೆದ ವಾರ ಹಣಕಾಸು ಸಚಿವ ಮಂಗಳ ಸಮರವೀರ ರದ್ದುಪಡಿಸಿದ್ದರು. ಸೋಮವಾರದಿಂದ ಮತ್ತೊಮ್ಮೆ ಈ ನಿರ್ಬಂಧವನ್ನು ಜಾರಿಗೆ ತರಬೇಕೆಂದು ಸಚಿವರಿಗೆ ಆದೇಶಿಸಿದ್ದೇನೆ” ಎಂದು ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದಾರೆ,
ಮಂಗಳ ಸಮರವೀರ ಅವರ ಕ್ರಮದ ವಿರುದ್ಧ ಲಂಕಾದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತು. ಹಣಕಾಸು ಸಚಿವರ ಕುಡಿತವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ಗುಂಪೊಂದು ಆಕ್ರೋಶ ವ್ಯಕ್ತಪಡಿಸಿತ್ತು.