ಭಾಂಬ್ರಿ ಸವಾಲು ಅಂತ್ಯ
Update: 2018-01-15 23:48 IST
ಮೆಲ್ಬೋರ್ನ್, ಜ.15: ಭಾರತದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುವ ಮೂಲಕ ನಿರಾಸೆ ಮೂಡಿಸಿದ್ದಾರೆ. 25ರ ಹರೆಯದ 122ನೇ ರ್ಯಾಂಕಿನ ಆಟಗಾರ ಭಾಂಬ್ರಿ ಸೋಮವಾರ ಎರಡು ಗಂಟೆ, 9 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.103ನೇ ಆಟಗಾರ ಮಾರ್ಕೊಸ್ ಬಾಘ್‌ಡಾಟಿಸ್ ವಿರುದ್ಧ 6-7(4), 4-6, 3-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಭಾಂಬ್ರಿ ಗ್ರಾನ್‌ಸ್ಲಾಮ್ ಟೂರ್ನಿಯ ಪ್ರಧಾನ ಸುತ್ತಿನ ಪಂದ್ಯದಲ್ಲಿ ಇನ್ನೂ ಗೆಲುವು ಸಾಧಿಸಿಲ್ಲ. ಈತನಕ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ.
2015ರಲ್ಲಿ ಪ್ರಧಾನ ಸುತ್ತಿಗೆ ತಲುಪಿದ್ದ ಭಾಂಬ್ರಿ ಮೊದಲ ಸುತ್ತಿನಲ್ಲಿ ಆ್ಯಂಡಿ ಮರ್ರೆಗೆ ಸೋತಿದ್ದರು. 2016ರಲ್ಲಿ ಮೊದಲ ಸುತ್ತಿನಲ್ಲಿ ಥಾಮಸ್ ಬೆರ್ಡಿಕ್ ವಿರುದ್ಧ ಸೋಲುವುದರೊಂದಿಗೆ ಮತ್ತೊಮ್ಮೆ ಎಡವಿದ್ದರು.