ಇವರ ಸಾಲಗಳನ್ನು ಯಾರು ತೀರಿಸುತ್ತಾರೆ?

Update: 2018-01-15 18:36 GMT

 ಭಾರತದಲ್ಲಿ ಜಯಚಂದಿರನ್‌ನಂತೆಯೇ ನೌಕರಿಗಾಗಿ ಹೋರಾಡುತ್ತಿರುವ ಸಾವಿರಾರು ಮಂದಿ ಇಂಜಿನಿಯರಿಂಗ್ ಪದವೀಧರರಿದ್ದಾರೆ. ಇದೇ ವೇಳೆ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತು ಶಿಕ್ಷಣದ ಮಟ್ಟ ಕುಸಿಯುತ್ತಲೇ ಇದೆ. ಇಂಜಿನಿಯರಿಂಗ್ ಪದವೀಧರರ ಹತಾಶೆಯೊಂದಿಗೆ ಅವರ ಸಾಲದ ಹೊರೆ ದೊಡ್ಡದಾಗುತ್ತಿದೆ. ಬ್ಯಾಂಕುಗಳು ಸಾಲ ಮರುಪಾವತಿಗಾಗಿ ಹೆಚ್ಚು ಹೆಚ್ಚು ಒತ್ತಡ ಹಾಕುತ್ತಿರುವಾಗ ಅವರ ಪೋಷಕರು ತಮ್ಮ ನಿವೃತ್ತ ನಿಧಿಗಳು, ಚಿನ್ನಾಭರಣಗಳನ್ನು ಒತ್ತೆ ಇಡುವುದು ಹಾಗೂ ತಮ್ಮ ಜಮೀನಿನ ಮಾರಾಟದ ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದಾರೆ.

 ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಬಿ.ಟೆಕ್. ಪದವಿ ಪಡೆದ ನಾಲ್ಕು ವರ್ಷಗಳ ಬಳಿಕ ಬಿ. ಜಯಚಂದಿರನ್ ತನ್ನ ಸೋಲನ್ನು ಒಪ್ಪಿಕೊಳ್ಳಲೇಬೇಕಾಯಿತು. ಆತ 2011ರಲ್ಲಿ, ತಮಿಳುನಾಡಿನ ತಾಂಜಾವೂರಿನಲ್ಲಿರುವ ಪೆರಿಯಾರ್ ಮುನಿಯಮ್ಮಾಯ್ ಇಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಿಂದ ಇಂಜಿನಿಯರಿಂಗ್ ಪದವಿ ಪಡೆದಿದ್ದ; ಇಂಜಿನಿಯರ್ ನೌಕರಿಗಳಿಗೆ ಅರ್ಜಿ ಸಲ್ಲಿಸಿದ್ದ. ಆದರೆ ನೌಕರಿ ಸಿಗಲಿಲ್ಲ. 2012 ಮತ್ತು 2013ರ ನಡುವೆ ಆತ ಚೆನ್ನೈಯಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಿದ. ಮುಂದಿನ ವರ್ಷ ಆತ ತಾಂಜಾವೂರಿನಲ್ಲಿ ಕಟ್ಟಡ ನಿರ್ಮಾಣ ಕಂಪೆನಿಯೊಂದರಲ್ಲಿ ಓರ್ವ ಡೇಟಾ ಎಂಟ್ರಿ ಆಪರೇಟರ್ ಆದ. ಆದರೆ ಈ ನೌಕರಿಯ ಸಂಬಳ ಅವನ ಶಿಕ್ಷಣ ಸಾಲ ತೀರಿಸಲು ಸಾಕಾಗಲಿಲ್ಲ. ಆದ್ದರಿಂದ 2015ರಲ್ಲಿ ಆತ ಈ ಕೆಲಸವನ್ನ್ನೂ ಬಿಟ್ಟು ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ಮಾಡ ತೊಡಗಿದ.

ಜಯಚಂದಿರನ್ ಒಂದೂವರೆ ಲಕ್ಷ ರೂ. ಶೈಕ್ಷಣಿಕ ಸಾಲ ಪಡೆದಿದ್ದ. ಇಪ್ಪತ್ತೆಂಟರ ಹರೆಯದ ಆತ ಈಗ ಬ್ಯಾಂಕ್‌ಗೆ ಮೂರು ಲಕ್ಷ ರೂಪಾಯಿ ಸಾಲ ಪಾವತಿಸಬೇಕಾಗಿದೆ. ಆತನ ತಂದೆ ಓರ್ವ ತಮಿಳುನಾಡು ಸರಕಾರದ ನಿವೃತ್ತ ಉದ್ಯೋಗಿ, ಎರಡು ವರ್ಷಗಳ ಹಿಂದೆ ಬ್ಯಾಂಕ್‌ಗೆ ನಲವತ್ತೈದು ಸಾವಿರ ರೂಪಾಯಿ ಪಾವತಿಸಿದ್ದರು. ಈಗ ತನ್ನ ಪಿಂಚಣಿ ಹಣದಿಂದ ಅವರು ಸಾಲದ ಮಾಸಿಕ ಕಂತುಗಳನ್ನು ಕಟ್ಟುತ್ತಿದ್ದಾರೆ.

ಭಾರತದಲ್ಲಿ ಜಯಚಂದಿರನ್‌ನಂತೆಯೇ ನೌಕರಿಗಾಗಿ ಹೋರಾಡುತ್ತಿರುವ ಸಾವಿರಾರು ಮಂದಿ ಇಂಜಿನಿಯರಿಂಗ್ ಪದವೀಧರರಿದ್ದಾರೆ. ಇದೇ ವೇಳೆ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತು ಶಿಕ್ಷಣದ ಮಟ್ಟ ಕುಸಿಯುತ್ತಲೇ ಇದೆ. ಇಂಜಿನಿಯರಿಂಗ್ ಪದವೀಧರರ ಹತಾಶೆಯೊಂದಿಗೆ ಅವರ ಸಾಲದ ಹೊರೆ ದೊಡ್ಡದಾಗುತ್ತಿದೆ. ಬ್ಯಾಂಕುಗಳು ಸಾಲ ಮರುಪಾವತಿಗಾಗಿ ಹೆಚ್ಚು ಹೆಚ್ಚು ಒತ್ತಡ ಹಾಕುತ್ತಿರುವಾಗ ಅವರ ಪೋಷಕರು ತಮ್ಮ ನಿವೃತ್ತ ನಿಧಿಗಳು, ಚಿನ್ನಾಭರಣಗಳನ್ನು ಒತ್ತೆ ಇಡುವುದು ಹಾಗೂ ತಮ್ಮ ಜಮೀನಿನ ಮಾರಾಟದ ಮೂಲಕ ಸಾಲ ಮರುಪಾವತಿ ಮಾಡುತ್ತಿದ್ದಾರೆ.

ಶಿಕ್ಷಣದಲ್ಲಿ ‘ಬ್ಯಾಡ್’ ಸಾಲಗಳು 2001ರಲ್ಲಿ ಆರಂಭಿಸಿ 2006 ಮತ್ತು 2009ರಲ್ಲಿ ಪುನರ್‌ವಿಮರ್ಶಿಸಲಾದ ಶೈಕ್ಷಣಿಕ ಸಾಲ ಯೋಜನೆಯಂತೆ ಶಿಕ್ಷಣದ ಕೋರ್ಸ್‌ನ ಅವಧಿಯಲ್ಲಿ ಮತ್ತು ಕೋರ್ಸ್ ಮುಗಿದ ನಂತರ ಒಂದು ವರ್ಷದವರೆಗೆ ವಿದ್ಯಾರ್ಥಿಗೆ ಬಡ್ಡಿ ರಹಿತ ಸಾಲ ದೊರೆಯುತ್ತದೆ. ಕುಟುಂಬದ ವಾರ್ಷಿಕ ಆದಾಯ ನಾಲ್ಕೂವರೆ ಲಕ್ಷ ರೂಪಾಯಿಗಿಂತ ಕಡಿಮೆ ಇರುವವರಿಗೆ ಕೊಲ್ಯಾಟರಲ್ ಭದ್ರತೆ ಒದಗಿಸಿದೆ. ಏಳುವರೆ ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿದೆ.

ಅದೇ ಅವಧಿಯಲ್ಲಿ (2001-2009) ಭಾರತದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳ ಸಂಖ್ಯೆ 2006-07ರಲ್ಲಿದ್ದ 1600ರಿಂದ 2016-17ರ ವೇಳೆಗೆ 3,391ಕ್ಕೆ ಜಿಗಿಯಿತು.

2013ರ ಮಾರ್ಚ್ ಮತ್ತು 2016ರ ಡಿಸೆಂಬರ್ ಮಧ್ಯೆ ತೊಂಬತ್ತು ದಿನಗಳಿಗಿಂತಲೂ ಹೆಚ್ಚು ಅವಧಿಗೆ ಶೈಕ್ಷಣಿಕ ಸಾಲ ಮರುಪಾವತಿಸದವರ ಸಾಲದ ಮೊತ್ತ 142 ಶೇಕಡಾದಷ್ಟು ಹೆಚ್ಚಳವಾಗಿ 6,336 ಕೋಟಿ ರೂಪಾಯಿ ಯಷ್ಟು ಆಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಇದು ಮಾರ್ಚ್ 2015ರಲ್ಲಿ 3536ರಲ್ಲಿ ಇದ್ದದ್ದು 2017ರ ಮಾರ್ಚ್ ವೇಳೆಗೆ 5,191.7 ಕೋಟಿ ರೂಪಾಯಿಗೆ ಏರಿದೆ ಎಂದು ವಿತ್ತ ಸಚಿವಾಲಯವು ಸಂಸತ್ತಿಗೆ ಹೇಳಿದೆ.

ಪೋಷಕರು ಪಾವತಿಸುತ್ತಿದ್ದಾರೆ

2013ರಲ್ಲಿ ಪ್ರವೀಕ್ ಪಾಂಡಾ ಒಡಿಶಾದ ಭುವನೇಶ್ವರದಲ್ಲಿರುವ ಇಂಜಿನಿಯರಿಂಗ್ ಕಾಲೇಜೊಂದರಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ. ತನ್ನ ನಾಲ್ಕು ವರ್ಷಗಳ ಕೋರ್ಸಿಗೆ ಆತ ಒಂದೂವರೆ ಲಕ್ಷ ರೂಪಾಯಿ ಸಾಲ ಪಡೆದ. ನಾಲ್ಕನೆಯ ವರ್ಷಾಂತ್ಯದಲ್ಲಿ ಕ್ಯಾಂಪಸ್‌ಗೆ ಕಂಪೆನಿಗಳು ಬಂದವಾದರೂ ಅವನ ತರಗತಿಯ ಅರವತ್ತೊಂದು ಮಂದಿ ವಿದ್ಯಾರ್ಥಿಗಳಲ್ಲಿ ನೌಕರಿಗೆ ಆಯ್ಕೆಯಾದವರು ಹದಿನೇಳು ಮಂದಿ ಮಾತ್ರ. ಮಿಕ್ಕವರು ದಿಲ್ಲಿ, ಪೂನಾ ಇತ್ಯಾದಿ ಕಡೆಗಳಿಗೆ ಹೋಗಿ ತಿಂಗಳಿಗೆ ಎಂಟು ಸಾವಿರದಿಂದ ಹತ್ತು ಸಾವಿರ ರೂಪಾಯಿ ವೇತನಕ್ಕೆ ದಿನಕ್ಕೆ ಹನ್ನೆರಡು ಗಂಟೆ ದುಡಿದರು. ಆದರೆ ಆ ಉದ್ಯೋಗಗಳು ಹತ್ತನೇ ತರಗತಿ ತೇರ್ಗಡೆಯಾದವರು ಮಾಡಬಹುದಾದಂತಹ ಉದ್ಯೋಗಗಳು. ರಾಜಸ್ಥಾನದ ಕಂಪನಿಯೊಂದರಲ್ಲಿ ಇಂತಹ ನೌಕರಿ ಮಾಡಿ ಸುಸ್ತಾದ ಪಾಂಡಾ 2015ರಲ್ಲಿ ಭುವನೇಶ್ವರಕ್ಕೆ ಮರಳಿ ಬಂದು ಖಾಸಗಿ ಕಾಲೇಜೊಂದರಲ್ಲಿ ಡಿಪ್ಲೊಮಾ ಇಂಜಿನಿಯರಿಂಗ್ ಬೋಧಿಸುವ ಶಿಕ್ಷಕನಾದ. ಈಗ ಆತ ರವಿಚಂದಿರನ್‌ರಂತೆ ಬ್ಯಾಂಕ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಅದೇ ವೇಳೆ ನಿವೃತ್ತ ಶಿಕ್ಷಕರಾದ ಅವನ ತಂದೆ ಅವನ ಬ್ಯಾಂಕ್ ಸಾಲ (1.7 ಲಕ್ಷ ರೂ.) ಪಾವತಿಸಲು ಹೆಣಗುತ್ತಿದ್ದಾರೆ. ಹಲವು ಕುಟುಂಬಗಳ ಕಥೆ ಇದು. ಅವನ ಗೆಳೆಯನೊಬ್ಬನ ತಂದೆ ಸಾಲ ತೀರಿಸಲು ತನ್ನ ಜಮೀನನ್ನೇ ಮಾರಬೇಕಾಯಿತು.

22ರ ಹರೆಯದ ಆದಿತ್ಯ ರತ್‌ಗೆ ಸಾಲ ಪಾವತಿ ಇನ್ನು ಕೆಲವು ತಿಂಗಳಲ್ಲಿ ಆರಂಭವಾಗುತ್ತದೆ ಆದರೆ ಆತನಿಗೆ ಇನ್ನೂ ನೌಕರಿ ದೊರೆತಿಲ್ಲ. ಆತ ಚಿಂತಿತನಾಗಿದ್ದಾನೆ. ಆತನಿಗೆ ಸದ್ಯದಲ್ಲೇ ನೌಕರಿ ಸಿಗದಿದ್ದಲ್ಲಿ ಅವನ ತಂದೆ ಕಟಕ್‌ನಲ್ಲಿರುವ ಅವರ ಜಮೀನನ್ನು ಮಾರಬೇಕಾಗುತ್ತದೆ. ತಡ ಮಾಡಿದಲ್ಲಿ ಬಡ್ಡಿಯ ಮೊತ್ತ ಏರುತ್ತಾ ಹೋಗುತ್ತದೆ.

ನಮಕ್ಕಲ್ ಜಿಲ್ಲೆಯ 26 ಹರೆಯದ ವಿ. ಶಿವ ಮತ್ತು ಚೆನೈಯ 23ರ ಹರೆಯದ ಅರುಣ್ ಕುಮಾರ್‌ಗೆ ನೌಕರಿ ದೊರೆತಿದೆಯಾದರೂ ಅವರಿಗೆ ಸಿಗುತ್ತಿರುವ ಅಲ್ಪ ವೇತನದಿಂದಾಗಿ ಅವರಿಗೆ ತಾವು ಪಡೆದ ಶೈಕ್ಷಣಿಕ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಅರುಣ್ ಕುಮಾರ್ ಕಾರು ಬಾಡಿಗೆ ಏಜೆನ್ಸಿಯೊಂದರಲ್ಲಿ ತಿಂಗಳೊಂದರ ಹನ್ನೊಂದು ಸಾವಿರ ರೂಪಾಯಿಗೆ ದುಡಿಯುತ್ತಿದ್ದಾರೆ. ಆತ ಪಡೆದ ನಲವತ್ತೆಂಟು ಸಾವಿರ ರೂಪಾಯಿ ಸಾಲದ ಮೊತ್ತ ಕಳೆದ ಜನವರಿಯಲ್ಲಿ ಎಪ್ಪತ್ತು ಸಾವಿರ ರೂ.ಗೆ ಏರಿತು. ಅವನ ತಂದೆ ಓರ್ವ ಬಡ ರೈತ. ಅವರು ತನ್ನ ಜಮೀನು ಮಾರದೆ ಅವನ ಸಾಲ ತೀರಿಸುವ ಸ್ಥಿತಿಯಲ್ಲಿಲ್ಲ.

ತಮಿಳುನಾಡು, ಕೇರಳದಲ್ಲಿ ದೊಡ್ಡ ಸಮಸ್ಯೆ

ಶೈಕ್ಷಣಿಕ ಸಾಲ ಪಡೆದು ಹಿಂದಿರುಗಿಸಲಾಗದವರ (ಡಿಫಾಲ್ಟರ್) ಸಮಸ್ಯೆ ಒಂದು ರಾಷ್ಟ್ರೀಯ ಸಮಸ್ಯೆಯಾದರೂ ಇದು ದೇಶದ ಎಲ್ಲ ರಾಜ್ಯಗಳಲ್ಲಿ ಸಮಾನ ಪ್ರಮಾಣದಲ್ಲಿಲ್ಲ. ಎರಡು ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಸಾಲ ಪಡೆದವರು ಮತ್ತು ಡಿಫಾಲ್ಟರ್‌ಗಳ ಸಂಖ್ಯೆ ಅತ್ಯಧಿಕವಾಗಿದೆ. ಸಾಲ ಮರುಪಾವತಿ ಮಾಡಲಾಗದ ವಿದ್ಯಾರ್ಥಿಗಳ ಪರವಾಗಿ ಬಳಕೆದಾರರ ಹಾಗೂ ಸಿವಿಲ್ ನ್ಯಾಯಾಲಯಗಳಲ್ಲಿ ವಾದಿಸುವ ಚೆನ್ನೈಯ ವಕೀಲ ಬಿ ಜಗನ್ನಾಥ್ ಪ್ರಕಾರ, ಅವರ ಕಕ್ಷಿದಾರರಲ್ಲಿ ಶೇ. 45ರಿಂದ 50 ಮಂದಿಗೆ ಏನೋ ಒಂದು ಉದ್ಯೋಗ ಇದೆ. ಅವರ ಪೋಷಕರು ನಿವೃತ್ತ ಸರಕಾರಿ ಉದ್ಯೋಗಿಗಳು. ಆದರೆ ಹಿರಿಯ ಅಧಿಕಾರಿಗಳಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಕಕ್ಷಿದಾರರು ಮತ್ತು ಬ್ಯಾಂಕುಗಳು ಒಂದೇ ಬಾರಿಗೆ ಇತ್ಯರ್ಥವಾಗುವ ಸಾಲದ ಒಂದು ಮೊತ್ತಕ್ಕೆ ಒಪ್ಪುತ್ತಾರೆ ಮತ್ತು ಪೋಷಕರು ಆ ಮೊತ್ತ ಪಾವತಿಸುತ್ತಾರೆ.

ಪ್ಲೇಸ್‌ಮೆಂಟ್‌ಗಳು, ಭಾರೀ ಆಶ್ವಾಸನೆಗಳು

 ಮಾರ್ಚ್ ತಿಂಗಳಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ‘‘ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಕೇವಲ ಶೇ. 40 ಮಂದಿಗೆ ಮಾತ್ರ ನೌಕರಿ ದೊರಕಿದೆ’’ ಎಂದು ಹೇಳಿದರು.

 ತಾವು ಕಲಿತ ಇಂಜಿನಿಯರಿಂಗ್ ಕಾಲೇಜುಗಳು ತಮ್ಮಲ್ಲಿ ವಿದ್ಯಾರ್ಥಿಗಳಿಗೆ ಶೇ. 100 ನೌಕರಿ, ಪ್ಲೇಸ್‌ಮೆಂಟ್ ಮತ್ತು ಕೈತುಂಬ ಸಂಬಳ ಎಂದು ಹೇಳಿಕೊಟ್ಟ ಆಶ್ವಾಸನೆಗಳು ಕೇವಲ ಉತ್ಪ್ರೇಕ್ಷೆ ಎಂದು ವಿದ್ಯಾರ್ಥಿಗಳಿಗೆ ಈಗ ಮನವರಿಕೆಯಾಗುತ್ತಿದೆ. ತನ್ನ ಕಾಲೇಜು ನೀಡಿದ್ದ ಜಾಹೀರಾತುಗಳನ್ನು ತಾನು ನಂಬಿದ್ದಕ್ಕೆ ಆದಿತ್ಯ ರತ್ ಪಶ್ಚಾತ್ತಾಪ ಪಡುತ್ತಿದ್ದಾನೆ. ತನ್ನ ಕಾಲೇಜಿನ ಒಂದೂವರೆ ಸಾವಿರ ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಸುಮಾರು ಮುನ್ನೂರು ವಿದ್ಯಾರ್ಥಿಗಳಿಗಷ್ಟೇ ಪ್ಲೇಸ್‌ಮೆಂಟ್ ಮೂಲಕ ನೌಕರಿ ದೊರಕಿದ್ದು, ಆತನೂ ಸೇರಿ ಇತರ ವಿದ್ಯಾರ್ಥಿಗಳಿಗೆ ಮೋಸವಾಗಿದೆ. ‘‘ದೊಡ್ಡ ಕಂಪೆನಿಗಳ ಪ್ರತಿನಿಧಿ ತಾನೆಂದು ಹೇಳಿದ ಒಂದು ಎಜನ್ಸಿ ನಮಗೆ ಸಂದರ್ಶನ ನಡೆಸಿ ಆಫರ್ ಲೆಟರ್‌ಗಳನ್ನು ನೀಡಿತ್ತು. ನಾವು ಆ ಕಂಪೆನಿಗಳಿಗೆ ಹೋದಾಗ ಅವರು ನಮ್ಮ ಕ್ಯಾಂಪಸ್‌ನಿಂದ ಯಾರನ್ನೂ ಆಯ್ಕೆ ಮಾಡಿಯೇ ಇಲ್ಲ ಎಂದರು’’ ಎಂದಿದ್ದಾನೆ ಆದಿತ್ಯ ರತ್.

‘‘ಕಾಲೇಜುಗಳೇ ಕಂಪೆನಿಗಳಿಗೆ ಹಣ ನೀಡುತ್ತವೆ. ವಿದ್ಯಾರ್ಥಿಗಳಿಗೆ ಕೆಲವು ತಿಂಗಳುಗಳ ಕಾಲ ನೌಕರಿ ನೀಡಲಾಗುತ್ತದೆ. ಮತ್ತೆ ಅವರನ್ನು ಹೊರ ಕಳುಹಿಸಲಾಗುತ್ತದೆ. ಇಂತಹ ಸಂಸ್ಥೆಗಳು ಬ್ಯಾಂಕುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುತ್ತವೆ.’’ ಎಂದಿದ್ದಾನೆ ಪಾಂಡ.

ಕೃಪೆ: scroll.in

Writer - ಶ್ರೇಯಾ ರಾಯ್ ಚೌಧರಿ

contributor

Editor - ಶ್ರೇಯಾ ರಾಯ್ ಚೌಧರಿ

contributor

Similar News

ಜಗದಗಲ
ಜಗ ದಗಲ