ಸ್ಕಾಟ್‌ಲ್ಯಾಂಡ್‌ನ ಭವ್ಯ ಹೊಟೇಲ್ ಖರೀದಿಸಿದ ಅನಿವಾಸಿ ಭಾರತೀಯ ಯೂಸುಫ್ ಅಲಿ

Update: 2018-01-16 17:23 GMT

ಲಂಡನ್, ಜ. 16: ಅನಿವಾಸಿ ಭಾರತೀಯ (ಎನ್‌ಆರ್‌ಐ) ಯೂಸುಫ್ ಅಲಿ ಎಂ.ಎ. ಸ್ಕಾಟ್‌ಲ್ಯಾಂಡ್ ರಾಜಧಾನಿ ಎಡಿನ್‌ಬರ್ಗ್‌ನಲ್ಲಿರುವ ಭವ್ಯ ಐತಿಹಾಸಿಕ ಹೊಟೇಲೊಂದನ್ನು ಖರೀದಿಸಿದ್ದಾರೆ.

ಯೂಸುಫ್ ಅಲಿ ಅವರ ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಲುಲು ಗ್ರೂಪ್ ಇಂಟರ್‌ನ್ಯಾಶನಲ್’ನ ಆತಿಥ್ಯ ಹೂಡಿಕೆ ವಿಭಾಗವಾಗಿರುವ ‘ಟ್ವೆಂಟಿ14 ಹೋಲ್ಡಿಂಗ್ಸ್’ 120 ಮಿಲಿಯ ಡಾಲರ್ (ಸುಮಾರು 769 ಕೋಟಿ ರೂಪಾಯಿ)ಗೆ ಸ್ಕಾಟ್‌ಲ್ಯಾಂಡ್ ಹೊಟೇಲನ್ನು ಖರೀದಿಸಿದೆ.

ಎಡಿನ್‌ಬರ್ಗ್ ಕೋಟೆಗೆ ಎದುರಾಗಿ ಇರುವ ದೊರೆ ಎಡ್ವರ್ಡ್ ಕಾಲದ 100 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಭವ್ಯ ಹೊಟೇಲ್ ‘ಕ್ಯಾಲಡೋನಿಯನ್’ ಈಗ ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ಗೆ ತೆಕ್ಕೆಗೆ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News