ಸಾಬರಮತಿ ಆಶ್ರಮಕ್ಕೆ ಮೋದಿ, ನೆತನ್ಯಾಹು ಭೇಟಿ

Update: 2018-01-17 10:54 GMT

ಅಹ್ಮದಾಬಾದ್, ಜ.17: ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರಧಾನಿ ಮೋದಿಯವರೊಂದಿಗೆ ಗುಜರಾತ್ ಗೆ ಭೇಟಿ ನೀಡಿದ್ದಾರೆ. ರೋಡ್ ಶೋ ಮೂಲಕ ಸಾಗಿದ ಮೋದಿ ಹಾಗು ನೆತನ್ಯಾಹು ಅಹ್ಮದಾಬಾದ್ ನ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಮೋದಿ ಹಾಗು ನೆತನ್ಯಾಹು ಗುಜರಾತ್ ನ ಬವ್ಲಾ ಪಟ್ಟಣದಲ್ಲಿರುವ ಐ ಕ್ರಿಯೇಟ್ ಸೆಂಟರನ್ನು ಉದ್ಘಾಟಿಸಿದರು. “ಎರಡೂ ದೇಶಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಪರಸ್ಪರ ಅಭಿವೃದ್ಧಿಯು ಅವಶ್ಯಕವಾಗಿದೆ. 21ನೆ ಶತಮಾನದಲ್ಲಿ ಭಾರತ ಹಾಗು ಇಸ್ರೇಲ್ ಮಾನವತೆಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಳೆದ ವರ್ಷ ನಾನು ಇಸ್ರೇಲ್ ಗೆ ಭೇಟಿ ನೀಡಿದ್ದಾಗ 40 ಯುಎಸ್ ಮಿಲಿಯನ್ ಡಾಲರ್ ಗಳಷ್ಟು ನಿಧಿಯನ್ನು ನಾವು ಹೂಡಿಕೆ ಮಾಡಿದ್ದೆವು. ತಾಂತ್ರಿಕ ನಾವೀನ್ಯತೆಯ ದಿಕ್ಕಿನಲ್ಲಿ ಎರಡೂ ದೇಶಗಳ ಪ್ರತಿಭೆಗಳಿಗೆ ಏನಾದರೂ ಮಾಡಲು ಇದು ಸಹಕಾರಿಯಾಗಿರುತ್ತದೆ. ನೀರು, ಆಹಾರ , ರೋಗ ಪರಿಹಾರಗಳಲ್ಲಿ ಈ ಜಂಟಿ ಉದ್ಯಮ ಕೇಂದ್ರೀಕರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News