ನಡಾಲ್, ಕಿರ್ಗಿಯೊಸ್ 3ನೇ ಸುತ್ತಿಗೆ ತೇರ್ಗಡೆ

Update: 2018-01-17 18:09 GMT

ಮೆಲ್ಬೋರ್ನ್, ಜ.17: ಅರ್ಜೆಂಟೀನದ ಲಿಯೊನಾರ್ಡೊ ಮಯೆರ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ವಿಶ್ವದ ನಂ.1 ಆಟಗಾರ ನಡಾಲ್ ಬುಧವಾರ 2 ಗಂಟೆ, 38 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಮಯೆರ್ ವಿರುದ್ಧ 6-3, 6-4, 7-6(7/4) ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.

ಕಳೆದ ವರ್ಷ ಫೈನಲ್‌ನಲ್ಲಿ ರೋಜರ್ ಫೆಡರರ್‌ಗೆ ಸೋತು ಪ್ರಶಸ್ತಿ ವಂಚಿತರಾಗಿರುವ ನಡಾಲ್ ಮುಂದಿನ ಸುತ್ತಿನಲ್ಲಿ 28ನೇ ಶ್ರೇಯಾಂಕದ ಬೋಸ್ನಿಯಾ ಆಟಗಾರ ಡಮಿರ್ ಝುಂಹರ್‌ರನ್ನು ಎದುರಿಸಲಿದ್ದಾರೆ.

17ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಟ್ಟಿರುವ ನಡಾಲ್ 2017ರ ಋತುವಿನ ಅಂತ್ಯದಲ್ಲಿ ಮಂಡಿನೋವಿಗೆ ಒಳಗಾಗಿದ್ದರು.

ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಸರ್ಬಿಯದ ವಿಕ್ಟರ್ ಟ್ರೊಸ್ಕಿಯವರನ್ನು 7-5, 6-4, 7-6(2) ಅಂತರದಿಂದ ಸೋಲಿಸಿ ಮೂರನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಕಿರ್ಗಿಯೊಸ್ ಮುಂದಿನ ಸುತ್ತಿನಲ್ಲಿ ಫ್ರೆಂಚ್‌ನ ಜೋ-ವಿಲ್ಫ್ರೆಡ್ ಸೋಂಗರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News