ಪೋಲಿಯೊ ಕಾರ್ಯಕರ್ತೆಯರ ಗುಂಡಿಕ್ಕಿ ಹತ್ಯೆ

Update: 2018-01-18 17:14 GMT

ಕರಾಚಿ, ಜ. 18: ಪಾಕಿಸ್ತಾನದ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ ಮತ್ತು ಅವರ ಮಗಳನ್ನು ಕ್ವೆಟ್ಟಾದಲ್ಲಿ ಗುರುವಾರ ಅಜ್ಞಾತ ಬಂದೂಕುಧಾರಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಸಂಘರ್ಷಪೀಡಿತ ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟ್ಟಾದ ಶಲ್ಕೋಟ್ ಪ್ರದೇಶದಲ್ಲಿ ಬಂದೂಕುಧಾರಿಗಳು ಪೊಲಿಯೊ ಲಸಿಕೆ ನೀಡುವ ತಂಡವೊಂದರ ಮೇಲೆ ಗುಂಡು ಹಾರಿಸಿದ್ದು, ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

 ಬೇಹುಗಾರಿಕೆ ನಡೆಸಲು ಹಾಗೂ ಮುಸ್ಲಿಮರ ಮೇಲೆ ಜನನ ನಿಯಂತ್ರಣ ಹೇರಲು ಪೋಲಿಯೊ ಕಾರ್ಯಕ್ರಮವನ್ನು ಬಳಸಲಾಗುತ್ತಿದೆ ಎಂಬುದಾಗಿ ಭಯೋತ್ಪಾದಕ ಗುಂಪು ತಾಲಿಬಾನ್ ಊಹಾಪೋಹಗಳನ್ನು ಹರಡಿರುವುದನ್ನು ಸ್ಮರಿಸಬಹುದಾಗಿದೆ. ಆ ಬಳಿಕ, ಪೋಲಿಯೊ ಲಸಿಕೆ ಕಾರ್ಯಕರ್ತರ ಮೇಲೆ ದಾಳಿಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News