ಭಗತ್ ಸಿಂಗ್‌ಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಲು ಪಾಕ್ ಸರಕಾರಕ್ಕೆ ಆಗ್ರಹ

Update: 2018-01-18 17:16 GMT

ಇಸ್ಲಮಾಬಾದ್, ಜ.18: ಭರತ್‌ಸಿಂಗ್‌ಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ನಿಶಾನ್-ಎ-ಹೈದರ್’ ನೀಡಬೇಕು ಹಾಗೂ ಭಗತ್‌ಸಿಂಗ್‌ನನ್ನು 86 ವರ್ಷದ ಹಿಂದೆ ಗಲ್ಲಿಗೇರಿಸಲಾಗಿದ್ದ ಲಾಹೋರ್‌ನ ಶಾದ್‌ಮಾನ್ ಚೌಕದಲ್ಲಿ ಭಗತ್‌ಸಿಂಗ್ ಪ್ರತಿಮೆ ಸ್ಥಾಪಿಸಬೇಕು ಎಂದು ಭಗತ್‌ಸಿಂಗ್ ಸ್ಮಾರಕ ಪ್ರತಿಷ್ಠಾನ ಪಾಕ್ ಸರಕಾರವನ್ನು ಆಗ್ರಹಿಸಿದೆ.

ಭಾರತೀಯ ಉಪಖಂಡವನ್ನು ಸ್ವತಂತ್ರಗೊಳಿಸುವ ಕಾರ್ಯದಲ್ಲಿ ತನ್ನ ಪ್ರಾಣವನ್ನು ತ್ಯಾಗ ಮಾಡಿರುವ ಭಗತ್ ಸಿಂಗ್‌ರನ್ನು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಆಲಿ ಜಿನ್ನಾ ಶ್ಲಾಘಿಸಿದ್ದಾರೆ. ಭಗತ್ ಸಿಂಗ್‌ಗೆ ‘ನಿಶಾನ್-ಎ-ಹೈದರ್’ ಪ್ರಶಸ್ತಿ ನೀಡಬೇಕು .ಅಲ್ಲದೆ ಶಾದ್‌ಮಾನ್ ಚೌಕದ ಹೆಸರನ್ನು ಭಗತ್‌ಸಿಂಗ್ ಚೌಕ ಎಂದು ಬದಲಿಸುವಂತೆಯೂ ಪ್ರತಿಷ್ಠಾನ ಒತ್ತಾಯಿಸಿದೆ. ಈ ಕುರಿತು ಸರಕಾರದ ಮೇಲೆ ಸತತ ಒತ್ತಡ ಹೇರಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ, ವಕೀಲರಾದ ಇಮ್ತಿಯಾಝ್ ರಷೀದ್ ಖುರೇಶಿ ತಿಳಿಸಿದ್ದಾರೆ.

1931ರ ಮಾರ್ಚ್ 23ರಂದು ಭಗತ್ ಸಿಂಗ್ ಹಾಗೂ ಅವರ ಇಬ್ಬರು ಸಹಚರರಾದ ರಾಜ್‌ಗುರು ಮತ್ತು ಸುಖ್‌ದೇವ್‌ರನ್ನು ಬ್ರಿಟಿಷ್ ಸರಕಾರದ ವಿರುದ್ಧ ಸಂಚು ನಡೆಸಿದ ಹಾಗೂ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಪಿ.ಸೌಂಡರ್‌ನನ್ನು ಹತ್ಯೆ ನಡೆಸಿದ ಆರೋಪದಡಿ ಲಾಹೋರ್‌ನಲ್ಲಿ ಗಲ್ಲಿಗೇರಿಸಲಾಗಿತ್ತು. ಆದರೆ ಹಪೀಝ್ ಸಯೀದ್ ನೇತೃತ್ವದ ಜಮಾತ್-ಉದ್-ದವಃ ಸಂಘಟನೆ ಈ ಪ್ರಸ್ತಾವವನ್ನು ವಿರೋಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News