×
Ad

6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅ.19 ರಿಂದ ಆರಂಭ

Update: 2018-01-18 23:57 IST

ಮುಂಬೈ, ಜ.18: ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 19 ರಿಂದ ಆರಂಭವಾಗಲಿದ್ದು, ಟೂರ್ನಿಯು 13 ವಾರಗಳ ಕಾಲ ಕಬಡ್ಡಿ ಪ್ರಿಯರನ್ನು ರಂಜಿಸಲಿದೆ.

ಆರು ಹಾಗೂ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಕ್ರಮವಾಗಿ ಈ ವರ್ಷದ ಅಕ್ಟೋಬರ್ 19 ಹಾಗೂ 2019ರ ಜುಲೈ 19ರಂದು ಆರಂಭವಾಗುತ್ತದೆ. ಈ ಎರಡು ಆವೃತ್ತಿಗಳು 13 ವಾರಗಳ ಕಾಲ ನಡೆಯುತ್ತವೆ ಎಂದು ಮಶಾಲ್ ಸ್ಪೋರ್ಟ್ಸ್ ಪ್ರೈ.ಲಿ. ಗುರುವಾರ ತಿಳಿಸಿದೆ.

ಕಳೆದ ವರ್ಷ ನಡೆದ ಐದನೇ ಆವೃತ್ತಿಯ ಕಬಡ್ಡಿ ಲೀಗ್‌ನಲ್ಲಿ 8 ತಂಡಗಳಿಂದ 12 ತಂಡಗಳಿಗೆ ವಿಸ್ತರಿಸಲಾಗಿತ್ತು.

ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಪ್ರದೀಪ್ ನರ್ವಾಲ್ ನೇತೃತ್ವದ ಪಾಟ್ನಾ ಪೈರಟ್ಸ್ ತಂಡ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಸೋಲಿಸಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News