ಬಾಂಗ್ಲಾಕ್ಕೆ ರೊಹಿಂಗ್ಯಾ ನಿರಾಶ್ರಿತರ ಮುಂದುವರಿದ ಪಲಾಯನ

Update: 2018-01-19 17:19 GMT

ಢಾಕಾ (ಬಾಂಗ್ಲಾದೇಶ), ಜ. 19: ರೊಹಿಂಗ್ಯಾ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಮುಂದಿನ ವಾರ ಚಾಲನೆ ನೀಡಲು ಉಭಯ ದೇಶಗಳು ಸಿದ್ಧತೆ ನಡೆಸಿರುವಂತೆಯೇ, ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈಯುವುದನ್ನು ಮುಂದುವರಿಸಿದ್ದಾರೆ.

ಕಳೆದ ಎರಡು ದಿನಗಳ ಅವಧಿಯಲ್ಲಿ 100ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶ ಪ್ರವೇಶಿಸಿದ್ದಾರೆ ಎಂದು ಬಾಂಗ್ಲಾದೇಶದ ಉಖಿಯ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲ್ಲಿ ನಿರಾಶ್ರಿತರು ವಿಶಾಲ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಪ್ರತಿಭಟನೆ

ಈ ನಡುವೆ, ತಮ್ಮನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಯೋಜನೆಯ ವಿರುದ್ಧ ಬಾಂಗ್ಲಾದೇಶದಲ್ಲಿ ನೂರಾರು ರೊಹಿಂಗ್ಯಾ ನಿರಾಶ್ರಿತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಆಗ್ನೇಯ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಿಗೆ ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರ ಯಾಂಗೀ ಲೀ ನೀಡಲಿರುವ ಭೇಟಿಗೆ ಪೂರ್ವಭಾವಿಯಾಗಿ ಈ ಪ್ರತಿಭಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News