ಉತ್ತರ ಯುರೋಪ್‌ನಲ್ಲಿ ಬಿರುಗಾಳಿ: 9 ಸಾವು

Update: 2018-01-19 17:29 GMT

 ಬರ್ಲಿನ್, ಜ. 19: ಉತ್ತರ ಯುರೋಪ್‌ನಲ್ಲಿ ಗುರುವಾರ ಬೀಸಿದ ಬಿರುಗಾಳಿಯಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ ವಾಯು ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಜರ್ಮನಿಯು ಎಲ್ಲ ದೂರ ಪ್ರಯಾಣದ ರೈಲು ಸಂಚಾರವನ್ನು ಕನಿಷ್ಠ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದೆ. ಅದೇ ವೇಳೆ, ಹಲವಾರು ದೇಶಿ ವಿಮಾನಗಳನ್ನು ರದ್ದುಗೊಳಿಸಿದೆ.

ಬಿರುಗಾಳಿಗೆ ಜರ್ಮನಿಯಲ್ಲಿ ಇಬ್ಬರು ಅಗ್ನಿಶಾಮಕರು ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಈ ಪೈಕಿ ಇಬ್ಬರು ಟ್ರಕ್ ಚಾಲಕರು. ಅವರ ವಾಹನಗಳನ್ನು ಬಿರುಗಾಳಿ ಎತ್ತಿ ಬಿಸಾಡಿದೆ.

ಉತ್ತರ ಜರ್ಮನಿಯ ತುದಿ ಭಾಗ ಬ್ರೋಕನ್‌ನಲ್ಲಿ ಗಂಟೆಗೆ 203 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಿದೆ.

ಬಿರುಗಾಳಿಯಿಂದಾಗಿ ನೆದರ್‌ಲ್ಯಾಂಡ್‌ನಲ್ಲಿ ಇಬ್ಬರು ಮರದಡಿ ಬಿದ್ದು ಮೃತಪಟ್ಟಿದ್ದಾರೆ.

ನೆರೆಯ ಬೆಲ್ಜಿಯಮ್‌ನಲ್ಲಿ ಕಾರೊಂದರ ಮೇಲೆ ಮರ ಬಿದ್ದು ಚಾಲಕಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News