ಶತಾಯುಷಿ ಒಲಿಂಪಿಯನ್ ಕಾರ್ಲಾ ಮರಂಗೊನಿ ನಿಧನ

Update: 2018-01-19 18:23 GMT

ಮಿಲನ್, ಜ.19: ಇಟಲಿಯ ಶತಾಯುಷಿ ಒಲಿಂಪಿಯನ್ ಕಾರ್ಲಾ ಮರಂಗೊನಿ(102 ವರ್ಷ)ನಿಧನರಾದರು ಎಂದು ಇಟಲಿ ಒಲಿಂಪಿಕ್ಸ್ ಸಮಿತಿ ಶುಕ್ರವಾರ ತಿಳಿಸಿದೆ.

ಮರಂಗೊನಿ 1928ರಲ್ಲಿ ಆಮ್‌ಸ್ಟರ್‌ಡಮ್‌ನಲ್ಲಿ ನಡೆದ ಒಲಿಂಪಿಕ್ ಗೇಮ್ಸ್‌ನಲ್ಲಿ ಟೀಮ್ ಜಿಮ್ನಾಸ್ಟಿಕ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಮರಂಗೊನಿ 12ನೇ ವರ್ಷದಲ್ಲಿ ಆಧುನಿಕ ಗೇಮ್ಸ್‌ನಲ್ಲಿ ಇಟಲಿ ತಂಡ ಚೊಚ್ಚಲ ಪದಕ ಜಯಿಸಲು ನೆರವಾಗಿದ್ದರು. ಗುರುವಾರ ಬೆಳಗ್ಗೆ ಪಾವಿಯಾದಲ್ಲಿರುವ ತನ್ನ ನಿವಾಸದಲ್ಲಿ ಮರಂಗೊನಿ ನಿಧನರಾದರು ಎಂದು ಇಟಲಿಯ ಸ್ಪೋರ್ಟ್ಸ್ ದಿನಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News