ಶ್ರೀಲಂಕಾ ವಿರುದ್ಧ ಬಾಂಗ್ಲಾಕ್ಕೆ ದಾಖಲೆ ಅಂತರದ ಗೆಲುವು

Update: 2018-01-19 18:26 GMT

ಢಾಕಾ, ಜ.19: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್‌ರ ಸತತ ಎರಡನೇ ಅರ್ಧಶತಕ, ಶಾಕಿಬ್ ಅಲ್ ಹಸನ್‌ರ ಆಲ್‌ರೌಂಡ್ ಆಟದ ನೆರವಿನಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧ 163 ರನ್‌ಗಳ ಅಂತರದ ಜಯ ದಾಖಲಿಸಿದೆ. ಶುಕ್ರವಾರ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ದಾಖಲೆ ಅಂತರದಲ್ಲಿ ಜಯಭೇರಿ ಬಾರಿಸಿತು.

ಝಿಂಬಾಬ್ವೆ ವಿರುದ್ಧ ಔಟಾಗದೆ 84 ರನ್ ಗಳಿಸಿದ್ದ ಇಕ್ಬಾಲ್ ಶ್ರೀಲಂಕಾ ವಿರುದ್ಧ 84 ರನ್(102 ಎಸೆತ, 7 ಬೌಂಡರಿ, 2 ಸಿಕ್ಸರ್) ಗಳಿಸಿ ಬಾಂಗ್ಲಾದೇಶಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಇಕ್ಬಾಲ್‌ಗೆ ಶಾಕಿಬ್(67, 63 ಎಸೆತ, 7 ಬೌಂಡರಿ) ಹಾಗೂ ಮುಶ್ಫಿಕುರ್ರಹೀಂ(62) ಸಮರ್ಥ ಸಾಥ್ ನೀಡಿದರು. ಈ ಮೂವರ ಸಾಹಸದಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾ 6 ವಿಕೆಟ್‌ಗಳ ನಷ್ಟಕ್ಕೆ 320 ರನ್ ಗಳಿಸಿತು. ಇದು ಶ್ರೀಲಂಕಾ ವಿರುದ್ಧ ದಾಖಲಿಸಿರುವ ಗರಿಷ್ಠ ಸ್ಕೋರಾಗಿದೆ.

ಬೌಲಿಂಗ್‌ನಲ್ಲೂ ಮಿಂಚಿದ ಶಾಕಿಬ್(3-47) ಶ್ರೀಲಂಕಾ ತಂಡವನ್ನು 32.3 ಓವರ್‌ಗಳಲ್ಲಿ 157 ರನ್‌ಗೆ ನಿಯಂತ್ರಿಸಿದರು. ನಾಯಕ ಮಶ್ರಾಫೆ ಮೊರ್ತಝಾ(2-30) ಹಾಗೂ ವೇಗದ ಬೌಲರ್ ರುಬೆಲ್ ಹುಸೈನ್(2-20) ತಲಾ ಎರಡು ವಿಕೆಟ್ ಕಬಳಿಸಿದರು. ಶ್ರೀಲಂಕಾ ಪರ ಪೆರೇರ(29 ರನ್, 14 ಎಸೆತ) ಅಗ್ರ ಸ್ಕೋರರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News