ಗಿಬ್ಸ್ ದಾಖಲೆ ಮುರಿದ ಡುಮಿನಿ

Update: 2018-01-19 18:29 GMT

ಜೋಹಾನ್ಸ್‌ಬರ್ಗ್, ಜ.19: ದಕ್ಷಿಣ ಆಫ್ರಿಕದ ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದೇ ಓವರ್‌ನಲ್ಲಿ 37 ರನ್ ಗಳಿಸಿದ ಜೆ.ಪಿ. ಡುಮಿನಿ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

   ಡುಮಿನಿ ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಎಡ್ಡಿ ಲೀ ಎಸೆದಿದ್ದ ಒಂದೇ ಓವರ್‌ನಲ್ಲಿ 6-6-6-6-2-5-ನೋಬಾಲ್-6 ರನ್ ಗಳಿಸಿದರು. ಒಟ್ಟು ಐದು ಸಿಕ್ಸರ್‌ಗಳನ್ನು ಸಿಡಿಸಿದ ಡುಮಿನಿ ತಮ್ಮದೇ ದೇಶದ ಹರ್ಷಲ್ ಗಿಬ್ಸ್ ದಾಖಲೆ(ಒಂದೇ ಓವರ್‌ನಲ್ಲಿ 36 ರನ್) ಮುರಿದರು. ಕೇಪ್ ಕೋಬ್ರಾಸ್ ತಂಡವನ್ನು ಪ್ರತಿನಿಧಿಸಿದ ಡುಮಿನಿ 37 ಎಸೆತಗಳಲ್ಲಿ ಔಟಾಗದೆ 70 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News