×
Ad

‘ನೀಟ್ 2018’ ಪಠ್ಯಕ್ರಮ ಬದಲಿಲ್ಲ: ಸಿಬಿಎಸ್‌ಇ

Update: 2018-01-20 23:01 IST

ಹೊಸದಿಲ್ಲಿ, ಜ.20: ‘ನೀಟ್’ (ಪದವಿತರಗತಿ)2018ರ ಪಠ್ಯಕ್ರಮ 2017ರ ನೀಟ್ ಪರೀಕ್ಷೆಯಂತೆಯೇ ಇರಲಿದೆ. ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಿಬಿಎಸ್‌ಇ ತಿಳಿಸಿದ್ದು,  ಈ ಕುರಿತ ಅಧಿಕೃತ ಅಧಿಸೂಚನೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಬಾರಿಯ ‘ನೀಟ್’ ಪರೀಕ್ಷೆಯಲ್ಲಿ ರಾಜ್ಯ ಪಠ್ಯಕ್ರಮವನ್ನು ಅಳವಡಿಸಲಾಗುವುದು ಎಂಬ ವದಂತಿಯನ್ನು ನಿರಾಕರಿಸಿರುವ ಸಿಬಿಎಸ್‌ಇ, ‘ನೀಟ್ 2018’ ಅಧಿಸೂನೆ ಶೀಘ್ರವೇ ಹೊರಬೀಳಲಿದೆ ಎಂದಿದೆ.

 2017ರಲ್ಲಿ ಪರೀಕ್ಷೆಯನ್ನು ಮೇ 7ರ ರವಿವಾರ ನಡೆಸಲಾಗಿದ್ದು ಈ ವರ್ಷವೂ ಮೇ ತಿಂಗಳಲ್ಲೇ ನಡೆಸುವ ಸಾಧ್ಯತೆಯಿದೆ. ದೇಶದಾದ್ಯಂತ ಎಂಬಿಬಿಎಸ್ ಪದವಿಗೆ ಸೇರ್ಪಡೆ ಪಡೆಯಲು ‘ನೀಟ್’ ಪರೀಕ್ಷೆ ನಡೆಸಲಾಗುತ್ತಿದ್ದು 2016ರಿಂದ ಇದನ್ನು ಕಡ್ಡಾಯಗೊಳಿಸಲಾಗಿದೆ. ಹಿಂದಿ, ಇಂಗ್ಲಿಷ್, ಉರ್ದು, ಗುಜರಾತಿ, ಮರಾಠಿ, ಒರಿಯಾ, ಬೆಂಗಾಲಿ, ಅಸ್ಸಾಮಿ, ತೆಲುಗು, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ‘ನೀಟ್’ ಪರೀಕ್ಷೆ ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News