ಹಿಜಾಬ್ ನಿಷೇಧ ವಾಪಸ್ ಪಡೆದ ಲಂಡನ್ ಶಾಲೆ

Update: 2018-01-21 17:05 GMT

ಲಂಡನ್, ಜ. 21: 8 ವರ್ಷಕ್ಕಿಂತ ಕೆಳಗಿನ ಬಾಲಕಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ಬ್ರಿಟನ್‌ನ ಸರಕಾರಿ ಶಾಲೆಯೊಂದು, ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದೆ.

ಪೂರ್ವ ಲಂಡನ್‌ನ ನ್ಯೂಹ್ಯಾಮ್‌ನಲ್ಲಿರುವ ಸೇಂಟ್ ಸ್ಟೀಫನ್ಸ್ ಸ್ಕೂಲ್, ಹಿಜಾಬ್ ನಿಷೇಧವನ್ನು ಈ ವರ್ಷ 11 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೂ ವಿಸ್ತರಿಸಲು ಯೋಚಿಸಿತ್ತು. ಆದರೆ, ಈಗ ಅದು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

 ‘‘ಶಾಲೆಯ ಸಮವಸ್ತ್ರ ನೀತಿ ಮಕ್ಕಳ ಆರೋಗ್ಯ, ಸುರಕ್ಷತೆ ಮತ್ತು ಕ್ಷೇಮವನ್ನು ಆಧರಿಸಿದೆ. ಈ ನೀತಿಗೆ ತಕ್ಷಣದಿಂದ ಬದಲಾವಣೆ ಮಾಡಲು ಶಾಲೆ ನಿರ್ಧಾರ ತೆಗೆದುಕೊಂಡಿದೆ. ನಮ್ಮ ಶಾಲಾ ಸಮುದಾಯದೊಂದಿಗೆ ನಡೆಸಿದ ಮಾತುಕತೆಗಳ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಶಾಲೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News