ಗುಜರಾತ್ ಸ್ಫೋಟ ಪ್ರಕರಣದ ಆರೋಪಿಯ ಸೆರೆ

Update: 2018-01-22 14:01 GMT

ಹೊಸದಿಲ್ಲಿ, ಜ.22: 2008ರ ಗುಜರಾತ್ ಸ್ಫೋಟದ ರೂವಾರಿಯನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿಕೊಂಡಿದ್ದಾರೆ.

ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯ (ಸಿಮಿ)- ಇಂಡಿಯನ್ ಮುಜಾಹಿದ್ದೀನ್‌ನ ಪ್ರಮುಖ ಉಗ್ರಗಾಮಿಗಳಲ್ಲಿ ಒಬ್ಬನಾಗಿರುವ ಅಬ್ದುಲ್ ಸುಬಾನ್ ಖುರೇಶಿಯನ್ನು ಬಂಧಿಸಿರುವುದಾಗಿ ಪೊಲೀಸ್ ಸಹಾಯಕ ಆಯುಕ್ತರಾದ (ವಿಶೇಷ ವಿಭಾಗ) ಪಿ.ಎಸ್ ಕುಶ್ವಾ ತಿಳಿಸಿದ್ದಾರೆ. 2008ರ ಜುಲೈ 26ರಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಎಪ್ಪತ್ತು ನಿಮಿಷಗಳ ಅವಧಿಯಲ್ಲಿ 21 ಬಾಂಬ್ ಸ್ಫೋಟಗೊಂಡ ಪರಿಣಾಮ 56 ಮಂದಿ ಸಾವನ್ನಪ್ಪಿದ್ದರೆ 200ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News