ಜಾವಾ ದ್ವೀಪದಲ್ಲಿ ಭೂಕಂಪ: ಕಟ್ಟಡಗಳಿಗೆ ಹಾನಿ
Update: 2018-01-23 22:47 IST
ಜಕಾರ್ತ (ಇಂಡೇನೇಶ್ಯ), ಜ. 23: ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆ ಹೊಂದಿರುವ ಭೂಕಂಪ ಇಂಡೋನೇಶ್ಯದ ಜಾವಾ ದ್ವೀಪದಲ್ಲಿ ಮಂಗಳವಾರ ಸಂಭವಿಸಿದೆ. ಭೂಕಂಪದಿಂದಾಗಿ ಕೇಂದ್ರ ಬಿಂದುವಿನ ಸಮೀಪದ ಕಟ್ಟಡಗಳಿಗೆ ಹಾನಿಯಾಗಿವೆ ಹಾಗೂ ರಾಜಧಾನಿ ಜಕಾರ್ತದ ಕಚೇರಿ ಕಟ್ಟಡಗಳು ನಡುಗಿವೆ.
ಸಾವು ನೋವಿನ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ ಹಾಗೂ ಸುನಾಮಿ ಎಚ್ಚರಿಕೆ ಹೊರಡಿಸಲಾಗಿಲ್ಲ.