ಚಲಿಸುತ್ತಿರುವ ರೈಲಿನ ಎದುರು ಸೆಲ್ಫಿ: ಆಸ್ಪತ್ರೆ ಸೇರಿದ ಯುವಕ

Update: 2018-01-25 07:05 GMT

ಹೈದರಾಬಾದ್, ಜ.25: ವೇಗವಾಗಿ ಮುಂದಕ್ಕೆ ಸಾಗುತ್ತಿರುವ ರೈಲಿನ ಎದುರು ಹಳಿ ಪಕ್ಕದಲ್ಲಿ ನಿಂತು ಸೆಲ್ಫೀ ತೆಗೆಯುತ್ತಿದ್ದ ಹೈದರಾಬಾದ್ ನಗರದ ಯುವಕನಿಗೆ ರೈಲು ಅಪ್ಪಳಿಸಿದ ವೀಡಿಯೋ ವೈರಲ್ ಆಗಿದ್ದು, ಯುವಕ ತಲೆಗೆ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾನೆ.

ಶಿವ ಎಂಬ ಯುವಕ ತನ್ನ ಸ್ಮಾರ್ಟ್ ಫೋನನ್ನು ಕೈಯಲ್ಲಿ ಹಿಡಿದುಕೊಂಡು ಸ್ಮೈಲ್ ಪೋಸ್ ಕೊಟ್ಟಿದ್ದನಲ್ಲದೆ ಬಲಗೈಯ್ಯನ್ನು ಹಿಂದಿನಿಂದ ಬರುತ್ತಿದ್ದ ಎಂಎಂಟಿಎಸ್ ಅಥವಾ ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ರೈಲಿನತ್ತ ಬೊಟ್ಟು ಮಾಡಿದ್ದ.

ಹತ್ತಿರದಲ್ಲಿದ್ದ ಯಾರೋ ಆತನಿಗೆ ಅಪಾಯದ ಎಚ್ಚರಿಕೆ ನೀಡಿದ ಹೊರತಾಗಿಯೂ ಆತ ‘ನಿಲ್ಲಿ’ ಎಂದು ಹೇಳುತ್ತಾ ಅದ್ಭುತವಾದ ಸೆಲ್ಫೀ ಒಂದನ್ನು ತೆಗೆಯುವ ದೃಢ ನಿರ್ಧಾರ ಕೈಗೊಂಡಿದ್ದ. ಆದರೆ ಅಷ್ಟರೊಳಗಾಗಿ ರೈಲಿನ ಸದ್ದು ಜೋರಾಗಿ ಕೇಳಿಸತೊಡಗಿದರೂ ತನ್ನತ್ತ ಮುನ್ನುಗ್ಗುತ್ತಿರುವ ಅಪಾಯವನ್ನೂ ಲೆಕ್ಕಿಸದೆ ಶಿವ ನಗುತ್ತಲೇ ಇದ್ದ. ಅರೆಕ್ಷಣದಲ್ಲಿ ರೈಲು ಆತನಿಗೆ ಢಿಕ್ಕಿ ಹೊಡೆಯುತ್ತಿದ್ದಂತೆಯೇ ವೀಡಿಯೋ ಬ್ಲ್ಯಾಂಕ್ ಆಗಿ ಬಿಡುತ್ತದೆ.

ರೈಲಿನ ವೇಗದ ಬಗ್ಗೆ ಶಿವನಿಗೆ ಸ್ಪಷ್ಟ ಅರಿವಿಲ್ಲದೆ ಈ ದುರ್ಘಟನೆ ಸಂಭವಿಸಿದೆ ಎಂದು ಆತನ ಸ್ನೇಹಿತರು ಹೇಳಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News