ಬಿರುಗಾಳಿ ಅಲೆಗೆ ಕದಲಿದ 620 ಟನ್ ಬಂಡೆಗಳು!

Update: 2018-01-25 11:48 GMT

ಐಲ್ಯಾಂಡ್‌ನ ಅನರ್ ದ್ವೀಪದ ಬಂಡೆಗಳಿಂದ ತುಂಬಿದ ಕರಾವಳಿಯ ಸಾಗರದ ಬಿರುಗಾಳಿ ಅಲೆಗಳು ಅಗಾಧ ಶಕ್ತಿ ಪ್ರದರ್ಶಿಸಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಪ್ರಬಲ ಕರಾವಳಿ ಬಿರುಗಾಳಿ ಅಲೆಗಳು ಬೀಸಿದ ಬಳಿಕ 2013-14ರಲ್ಲಿ ಚಳಿಗಾಲದಲ್ಲಿ ಇನಿಶ್‌ಮೋರೆಯ ದ್ವೀಪವೊಂದರಲ್ಲಿ 620 ಟನ್ ಬೌಲ್ಡರ್ (90 ದೊಡ್ಡ ಆಫ್ರಿಕನ್ ಆನೆಗಳಷ್ಟು ಗಾತ್ರ) ಹೆಬ್ಬಂಡೆಗಳು ಹಲವು ಮೀಟರ್‌ಗಳಷ್ಟು ಚಲಿಸಿವೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ಅಲೆಗಳಿಂದ 100 ಟನ್ ಭಾರದ 6 ಬಂಡೆಗಳು ಹಾಗೂ 50 ಟನ್‌ಗೂ ಅಧಿಕ ಭಾರದ 18 ಬಂಡೆಗಳನ್ನು ಬಿರುಗಾಳಿ ಅಲೆಗಳು ಸ್ಥಳಾಂತರಗೊಳಿಸಿವೆ ಎಂದು ಎಂದು ವಿಲಿಯಂ ಕಾಲೇಜಿನ ಭೂಗರ್ಭ ಶಾಸ್ತ್ರಜ್ಞ ರೊನಾದ್ ಕಾಕ್ಸ್ ನೇತೃತ್ವದ ಸಂಶೋಧಕರು ತಂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ