ರೊಹಿಂಗ್ಯಾ ವಾಪಸಾತಿ ಸದ್ಯ ಸುರಕ್ಷಿತವಲ್ಲ: ವಿಶ್ವಸಂಸ್ಥೆ ಅಧಿಕಾರಿ

Update: 2018-01-25 17:30 GMT

ಕುಟುಪಲೊಂಗ್ (ಬಾಂಗ್ಲಾದೇಶ), ಜ. 25: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಹಿಂಸಾಚಾರ ಇನ್ನೂ ಮುಂದುವರಿಯುತ್ತಿರುವಂತೆ ಗೋಚರಿಸುತ್ತಿದೆ; ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರು ತಮ್ಮ ಮನೆಗಳಿಗೆ ಮರಳುವುದು ಸುರಕ್ಷಿತವಲ್ಲ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್‌ನ ಉಪಕಾರ್ಯಕಾರಿ ನಿರ್ದೇಶಕ ಜಸ್ಟಿನ್ ಫೋರ್‌ಸಿತ್ ಬುಧವಾರ ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿರುವ ತಮ್ಮ ಊರುಗಳಿಗೆ ಮರಳಲು ಹೆಚ್ಚಿನ ರೊಹಿಂಗ್ಯಾ ನಿರಾಶ್ರಿತರು ಬಯಸಿದ್ದಾರೆ ಎಂದು ಬಾಂಗ್ಲಾದೇಶದ ಕುಟುಪಲೊಂಗ್ ನಿರಾಶ್ರಿತ ಶಿಬಿರಕ್ಕೆ ಭೇಟಿ ನೀಡಿದ ವೇಳೆ ಅವರು ಹೇಳಿದರು.

ಆದಾಗ್ಯೂ, ಈಗ ತಾವು ಮ್ಯಾನ್ಮಾರ್‌ಗೆ ಹೋದರೆ ತಮ್ಮ ಪ್ರಾಣಗಳಿಗೆ ಬೆದರಿಕೆಯಿದೆ ಎಂಬ ಭೀತಿಯನ್ನು ಅವರು ಹೊಂದಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News