35ಕ್ಕೂ ಅಧಿಕ ಡಿಗ್ರಿಗಳ ಒಡೆಯ ಲಕ್ಷ್ಮೀದಾಸ್

Update: 2018-01-29 11:03 GMT

ಕೆಲವರು ತಮ್ಮ ವಿದ್ಯಾರ್ಹತೆಯ ಬಗ್ಗೆ ತುಂಬಾ ಹೆಮ್ಮೆಪಟ್ಟುಕೊಳ್ಳು ತ್ತಿರುತ್ತಾರೆ. ಆದರೆ, ಡಿಗ್ರಿಗಳು ಮತ್ತಿತರ ಶೈಕ್ಷಣಿಕ ಬಿರುದುಗಳನ್ನು ಪಡೆದಿರುವ ವಿಷಯದಲ್ಲಿ ಮಾತ್ರ ಕೇರಳದ ನಿವಾಸಿ ಲಕ್ಷ್ಮಿದಾಸನ್‌ರನ್ನು ಮೀರಿಸುವವರು ಇರಲಾರರೇನೋ?.
ಲಕ್ಷ್ಮಿದಾಸನ್ ಈವರೆಗೆ 35 ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರಂತೆ. ಇದರ ಜೊತೆಗೆ 6 ಡಾಕ್ಟರೇಟ್ ಹಾಗೂ 1 ಡಿಲಿಟ್ ಪದವಿ ಕೂಡಾ ಪಡೆದಿದ್ದಾರೆ. ಇದಲ್ಲದೆ 2 ಸ್ನಾತಕೋತ್ತರ ಡಿಪ್ಲೊಮಾ ಹಾಗೂ 4 ಸ್ನಾತಕ ಪದವಿಗಳು ಕೂಡಾ ಇವರಲ್ಲಿವೆ. ಲಕ್ಷ್ಮಿದಾಸನ್‌ರ ಅಭೂತಪೂರ್ವ ಶೈಕ್ಷಣಿಕ ಅರ್ಹತೆಯ ಸಂಪೂರ್ಣ ವಿವರ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ, ಯೂಟ್ಯೂಬ್‌ಗಳಲ್ಲಿ ಲಭ್ಯವಿದೆ. ಅವರು ಪಡೆದಿರುವ ಡಿಗ್ರಿಗಳನ್ನು ಕಂಡು ಯಾರಾದರೂ ಹುಬ್ಬೇರಿಸದೆ ಇರಲಾರರು.
ಹಲವಾರು ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುವ ಲಕ್ಷ್ಮಿದಾಸನ್ ಓರ್ವ ಜನಪ್ರಿಯ ನ್ಯಾಯವಾದಿಯೂ ಹೌದು. ಕೆಲವು ಕಾಲೇಜುಗಳಿಗೆ ಸಂದರ್ಶಕ ಪ್ರೊಫೆಸರ್ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಉಪನ್ಯಾಸಕ, ಕವಿ,ಕಾದಂಬರಿಕಾರ, ಪತ್ರಕರ್ತ, ಅನುವಾದಕ, ಚಿಂತಕ, ಗೈಡ್, ಇತಿಹಾಸತಜ್ಞ, ಜ್ಯೋತಿಷಿ, ಭಾಷಾ ತಜ್ಞ, ಮನಃಶಾಸ್ತ್ರಜ್ಞ, ಸಮಾಜಸೇವಕ, ಉದ್ಯಮ, ಮಾನವಸಂಪನ್ಮೂಲ, ರಾಜಕೀಯ, ವಿತ್ತ ಕ್ಷೇತ್ರಗಳಲ್ಲಿ ಸಲಹೆಗಾರರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ.
50 ವರ್ಷದ ಲಕ್ಷ್ಮಿದಾಸನ್ ಪತ್ನಿ, ಇಬ್ಬರು ಮಕ್ಕಳು ಹಾಗೂ ತಾಯಿಯೊಂದಿಗೆ ವಾಸವಾಗಿದ್ದಾರೆ. ಬೇರೆ ಬೇರೆ ವಿಷಯಗಳಲ್ಲಿಯೂ ಪಿಎಚ್‌ಡಿ ಗಳಿಸಿರುವ ಅವರು ಮಲಯಾಳಂ, ಸಂಸ್ಕೃತ ಭಾಷೆಗಳಲ್ಲಿ ಹಾಗೂ ಹಿಂದಿ, ಮ್ಯಾನೇಜ್ ಮೆಂಟ್,ಜ್ಯೋತಿಷ್ಯ ವಿಷಯ ಗಳಲ್ಲೂ ಪಾಂಡಿತ್ಯ ಪಡೆದಿದ್ದಾರೆ. ಲಕ್ಷ್ಮಿದಾಸನ್ ಅವರು ಈವರೆಗೆ 21 ಪುಸ್ತಕಗಳನ್ನು ಕೂಡಾ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ