ಸಹಾರಾ ಮರುಭೂಮಿಯಲ್ಲಿ ಮಧ್ಯಮ ಗಾತ್ರದ ಡೈನೊಸಾರ್ ಕುರುಹು ಪತ್ತೆ

Update: 2018-02-01 09:51 GMT

80 ಮಿಲಿಯನ್ ವರ್ಷಗಳ ಹಿಂದೆ ಜೀವಿಸಿತ್ತು ಎನ್ನಲಾದ ಉದ್ದನೆಯ ಕುತ್ತಿಗೆಯ, ಶಾಲಾ ಬಸ್ ಗಾತ್ರದ ಡೈನೊಸಾರ್ ತಳಿಯನ್ನು ಈಜಿಪ್ಟ್ ನ ಸಹಾರಾ ಮರುಭೂಮಿಯಲ್ಲಿ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಈ ಅನ್ವೇಷಣೆಯು ಆಫ್ರಿಕಾದಲ್ಲಿ ಡೈನೊಸಾರ್‌ಗಳ ವಿಕಸನದ ಮೇಲೆ ಬೆಳಕು ಚೆಲ್ಲಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಜಿಪ್ಟ್‌ನ ಮನಸೊರಾ ವಿಶ್ವವಿದ್ಯಾನಿಲಯದ ತಂಡವು ನಡೆಸಿದ ಉತ್ಖನನದ ವೇಳೆ ಮನ್ಸೋರ ಸೌರಸ್ ಶಹಿನೆ ಎಂದು ಹೆಸರಿಸಲಾಗಿರುವ ಡೈನೊಸಾರ್‌ನ ಪಳೆಯುಳಿಕೆಗಳು ಪತ್ತೆಯಾಗಿವೆ.

ಈ ಪಳೆಯುಳಿಕೆಗಳ ಪತ್ತೆಯಿಂದ ಈಜಿಪ್ಟ್ ಮತ್ತು ಆಫ್ರಿಕದ ಜೀವವಿಕಸನದ ಬಗ್ಗೆ ಸಂಶೋಧನೆ ನಡೆಸಲು ಸಹಕಾರಿಯಾಗಲಿದೆ ಎಂದು ಎರಿಕ್ ಗೋರ್ಸಾಕ್ ತಿಳಿಸಿದ್ದಾರೆ. ಮನ್ಸೋರಸೌರಸ್‌ಗಳು ಮಧ್ಯಮ ಗಾತ್ರ ಡೈನೊಸಾರ್‌ಗಳಾಗಿದ್ದು ಆಫ್ರಿಕದ ಆನೆಗಳಷ್ಟು ತೂಕವನ್ನು ಹೊಂದಿದ್ದವು. ಸದ್ಯ ದೊರಕಿರುವ ಪಳೆಯುಳಿಕೆಯು ಸಂಪೂರ್ಣ ದೇಹರಚನೆಯನ್ನು ಹೊಂದಿದ್ದು ಈ ರೀತಿ ದೊರೆತ ಮೊದಲ ಪಳೆಯುಳಿಕೆಯಾಗಿದೆ ಎಂದು ಗೋರ್ಸಾಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ