ದ.ಆಫ್ರಿಕ ವಿರುದ್ಧ ಮೊದಲ ಏಕದಿನ ಪಂದ್ಯ : ಭಾರತಕ್ಕೆ ಭರ್ಜರಿ ಗೆಲುವು

Update: 2018-02-01 18:41 GMT

  ಡರ್ಬನ್,ಫೆ.1: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ (112)ಮತ್ತು ಮಧ್ಯಮ ಸರದಿಯ ದಾಂಡಿಗ ಅಜಿಂಕ್ಯ ರಹಾನೆ ಗಳಿಸಿದ ಆಕರ್ಷಕ 79 ರನ್‌ಗಳ ನೆರವಿನಿಂದ ಭಾರತ 6ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

270 ರನ್‌ಗಳ ಸವಾಲನ್ನು ಪಡೆದಿದ್ದ ಭಾರತ 45.3ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿ ಗೆಲುವಿನ ದಡ ಸೇರಿತು. ಭಾರತ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮೂರನೇ ವಿಕೆಟ್‌ಗೆ 189 ರನ್‌ಗಳ ಕೊಡುಗೆ ನೀಡಿದರು.

ಕೊಹ್ಲಿ 105 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಲ್ಲಿ 33ನೇ ಶತಕ ಪೂರ್ಣಗೊಳಿಸಿದರು. ರಹಾನೆ 79 ರನ್(86ಎ, 5ಬೌ,2ಸಿ) ಮತ್ತು . ಕೊಹ್ಲಿ 112 ರನ್ ( 119ಎ, 10ಬೌ) ಗಳಿಸಿ ಗಳಿಸಿ ಔಟಾದರು. ಮಹೇಂದ್ರ ಸಿಂಗ್ ಧೋನಿ ಔಟಾಗದೆ 4 ಮತ್ತು ಹಾರ್ದಿಕ್ ಪಾಂಡ್ಯ 3 ರನ್ ಗಳಿಸಿ ಔಟಾಗದೆ ಉಳಿದರು. ಭಾರತ ಈ ಗೆಲುವಿನೊಂದಿಗೆ 6 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 ರೋಹಿತ್ ಶರ್ಮಾ 20 ರನ್ ಮತ್ತು ಶಿಖರ್ ಧವನ್ 35 ರನ್ ಗಳಿಸಿದರು.

ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡ ಪ್ಲೆಸಿಸ್ ಶತಕದ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 8ವಿಕೆಟ್ ನಷ್ಟದಲ್ಲಿ 269 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News