ಕುಪ್ವಾರದಲ್ಲಿ ಹಿಮಪಾತ: ಮೂವರು ಸೈನಿಕರು ಮೃತ್ಯು
Update: 2018-02-02 21:21 IST
ಶ್ರೀನಗರ, ಫೆ.2: ಉತ್ತರ ಕಾಶ್ಮೀರದ ಕುಪ್ವಾರ ಮಚ್ಚಿಲ್ ಸೆಕ್ಟರ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೂವರು ಯೋಧರು ಮೃತಪಟ್ಟು ಒಬ್ಬ ಯೋಧ ಗಾಯಗೊಂಡ ಘಟನೆ ನಡೆದಿದೆ.
ರಾಜ್ ಪತ್ 21 ಆರ್ಮಿ ಪೋಸ್ಟ್ ಸಮೀಪ ಹಿಮಪಾತ ಸಂಭವಿಸಿದೆ ಎನ್ನಲಾಗಿದೆ. “ಮಚ್ಚಿಲ್ ಸೆಕ್ಟರ್ ನಲ್ಲಿ ಸಂಭವಿಸಿದ ಹಿಮಪಾತವು ದುರದೃಷ್ಟಕರ. ಸೇನೆಯು ಮೂವರು ಯೋಧರನ್ನು ಕಳೆದುಕೊಂಡಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಮ್ಮು ಹಾಗು ಕಾಶ್ಮೀರದ ಹಲವು ಜಿಲ್ಲೆಗಳಿಗೆ ಹಿಮಪಾತದ ಎಚ್ಚರಿಕೆ ನೀಡಿದ 2 ದಿನಗಳ ನಂತರ ಈ ಘಟನೆ ನಡೆದಿದೆ.