ಬಜೆಟ್ ಎಫೆಕ್ಟ್: ಶೇರುಪೇಟೆಯಲ್ಲಿ ಮಹಾಕುಸಿತ

Update: 2018-02-02 17:25 GMT

►ನಿಫ್ಟಿ 10,800 ಅಂಕಗಳಿಗಿಂತ ಕಡಿಮೆ

►ಒಂದೇ ದಿನದಲ್ಲಿ 5 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

  ಮುಂಬೈ,ಫೆ.2: ಬಜೆಟ್ ಮಂಡನೆಯ ಬಳಿಕ ಶೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಶುಕ್ರವಾರವೂ ಮುಂದುವರಿದಿದೆ. ಮುಂಬೈ ಶೇರು ಮಾರುಕಟ್ಟೆಯಲ್ಲಿ ಶೇರು ಸೂಚ್ಯಂಕವು 840 ಅಂಕಗಳಿಗೆ ಕುಸಿದಿದ್ದರೆ, ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ 10,800 ಅಂಕಗಳ ಗಡಿಯಿಂದ ಕೆಳಗಿಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಉಂಟಾದ ಅತೀ ದೊಡ್ಡ ಕುಸಿತ ಇದೆನ್ನಲಾಗಿದೆ.

ಈಕ್ವಿಟಿಗಳ ಮೇಲೆ ಅಧಿಕ ತೆರಿಗೆ ವಿಧಿಸುವ ಬಜೆಟ್ ಪ್ರಸ್ತಾಪದಿಂದ ಹೂಡಿಕೆದಾರರು ಆತಂಕಗೊಂಡಿ ರು ವುದು ಶೇರುಪೇಟೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

 ಕೇಂದ್ರ ವಿತ್ತ ಸಚಿವ ಗುರುವಾರ ಮಂಡಿಸಲಾದ 2018-19ರ ಸಾಲಿನ ಬಜೆಟ್‌ನಲ್ಲಿ ಈಕ್ವಿಟಿಗಳ ಮೇಲಿನ ದೀರ್ಘಕಾಲ ಬಂಡವಾಳ ಲಾಭದ ಮೇಲೆ ತೆರಿಗೆ ಹಾಗೂ ಈಕ್ವಿಟಿ ಆಧಾರಿತ ಮ್ಯುಚುವಲ್ ಫಂಡ್‌ಗಳ ಆದಾಯದ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದೆ.

 ಶೇರು ಬೆಲೆಗಳ ಕುಸಿತದಿಂದಾಗಿ ಶುಕ್ರವಾರ ಒಂದೇ ದಿನದಲ್ಲಿ 4.7 ಲಕ್ಷ ಕೋಟಿ ರೂ.ಯನ್ನು ಹೂಡಿಕೆದಾರರು ಕಳೆದುಕೊಂಡಿದ್ದಾರೆಂದು ಅಂದಾಜಿಸ ಲಾಗಿದೆ. ಹಾಲಿ ವಿತ್ತ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ.3.2ಕ್ಕೆ ಸೀಮಿತಗೊಳಿಸಲು ಈ ಮೊದಲು ಗುರಿಯಿರಿಸಲಾಗಿದ್ದರೂ, ಸಚಿವ ಅರುಣ್ ಜೇಟ್ಲಿ ಬಜೆಟ್‌ನಲ್ಲಿ ಶೇ.3.5 ವಿತ್ತೀಯ ಕೊರತೆಯ ಸಾಧ್ಯತೆಯನ್ನು ಪ್ರಸ್ತಾಪಿಸಿರುವುದು ಕೂಡಾ ಶೇರು ಮಾರುಕಟ್ಟೆಯಲ್ಲಿ ಆತಂಕ ಉಲ್ಬಣಿಸಲು ಕಾರಣವಾಗಿದೆಯೆನ್ನಲಾಗಿದೆ.

ಸರಕಾರದ ಹೆಚ್ಚಿನ ಸಾಲದ ಹೊರೆಯು, ರಾಷ್ಟ್ರದ ಕ್ರೆಡಿಟ್ ರೇಟಿಂಗ್ ಅಪ್‌ಗ್ರೇಡ್ ಆಗುವುದನ್ನು ನಿರ್ಬಂ ಧಿಸಲಿದೆಯೆಂದು ‘ಫಿಚ್ ರೇಟಿಂಗ್ಸ್’ ಸಂಸ್ಥೆ ವರದಿ ಮಾಡಿರುವ ಬೆನ್ನಲ್ಲೇ ಶೇರು ಮಾರುಕಟ್ಟೆಯಲ್ಲಿ ಶೇರುಬೆಲೆಗಳು ಒಂದೇ ಸಮನೆ ಕುಸಿಯತೊಡಗಿವೆ ಎಂದು ಮೂಲಗಳು ತಿಳಿಸಿವೆ.

 ಮುಂಬೈ ಶೇರುಮಾರುಕಟ್ಟೆಯಲ್ಲಿ ದಿನದ ವಹಿವಾಟು ಕೊನೆಗೊಂಡ ವೇಳೆಗೆ ಶೇರು ಸೂಚ್ಯಂಕವು 839.91 ಅಂಕಗಳಷ್ಟು ಕುಸಿದಿದ್ದು, 35,066.75ಕ್ಕೆ ಬಂದು ತಲುಪಿದೆ. 2015ರ ಆಗಸ್ಟ್ 24ರಂದು ಮುಂಬೈ ಶೇರು ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಶೇರು ಸೂಚ್ಯಂಕವು 1,624.51 ಅಂಕ ಗಳನ್ನು ಕಳೆದುಕೊಂಡ ವಿದ್ಯಮಾನದ ಬಳಿಕ ಒಂದೇ ದಿನದ ವಹಿವಾಟಿನಲ್ಲಿ ಅತೀ ದೊಡ್ಡ ಸೆನ್ಸೆಕ್ಸ್ ಕುಸಿತ ಇದೆನ್ನಲಾಗಿದೆ.

ರಾಷ್ಟ್ರೀಯ ಶೇರುಪೇಟೆ ನಿಫ್ಟಿಯಲ್ಲಿ ಸೂಚ್ಯಂಕವು ಶುಕ್ರವಾರ ದಿನದಾಂತ್ಯದ ವೇಳೆಗೆ 256.30 ಅಂಕಗಳ ಕುಸಿತ ಕಂಡಿದ್ದು, 10,760ಕ್ಕೆ ಬಂದು ತಲುಪಿದೆ.

ಗುರುವಾರ ಶೇರು ಮಾರುಕಟ್ಟೆ ಇಳಿಮುಖವಾಗುತ್ತಿದ್ದಂತೆಯೇ ಆತಂಕಿತರಾದ ದೇಶೀಯ ಸಾಂಸ್ಥಿಕ ಹೂಡಿಕೆದಾರರು 358.50 ಕೋಟಿ ರೂ.ವೌಲ್ಯದ ಶೇರುಗಳನ್ನು ಮಾರಾಟ ಮಾಡಿದ್ದರೆ, ವಿದೇಶಿ ಹೂಡಿಕೆದಾರರು 1,099.780 ಕೋಟಿ ರೂ.ವೌಲ್ಯದ ಶೇರುಗಳನ್ನು ಖರೀದಿಸಿದ್ದಾರೆಂದು ದತ್ತಾಂಶಗಳು ವರದಿ ಮಾಡಿವೆ.

ಬಜಾಜ್ ಆಟೋ ಕಂಪೆನಿಯ ಶೇರುದರ 4.90ರಷ್ಟು ಕುಸಿಯವು ದರೊಂದಿಗೆ ಅತ್ಯಂತ ಕಳಪೆ ನಿರ್ವಹಣೆಯನ್ನು ಕಂಡಿದೆ. ಶೇ.4.62ಕುಸಿತ ಕಂಡಿರುವ ಭಾರ್ತಿ ಏರ್‌ಟೆಲ್ ಆನಂತರದ ಸ್ಥಾನದಲ್ಲಿದೆ.

ಹಾಗೆಯೇ ಆ್ಯಕ್ಸಿಸ್ ಬ್ಯಾಂಕ್, ಮಾರುತಿ ಸುಝುಕಿ, ರಿಲಾಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಎಂಆ್ಯಂಡ್ ಎಂ, ಎಚ್‌ಡಿಎಫ್‌ಸಿ ಲಿಮಿಟೆಡ್, ಐಸಿಐಸಿಐ ಬ್ಯಾಂಕ್,ಕೋಟಕ್ ಬ್ಯಾಂಕ್ , ಆದಾನಿ ಪೋರ್ಟ್ಸ್ ಮತ್ತಿತರ ಕಂಪೆನಿಗಳ ಶೇರುದರಗಳು ಶೇ.4.28ರವರೆಗೆ ಕುಸಿತವನ್ನು ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News