×
Ad

ಪಾಕ್‌ನಿಂದ 47 ಭಾರತೀಯ ಬೆಸ್ತರ ಬಂಧನ

Update: 2018-02-04 22:49 IST

ಇಸ್ಲಾಮಾಬಾದ್,ಫೆ.4: ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನಕ್ಕೆ ಸೇರಿದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೆನ್ನಲಾದ 47 ಮಂದಿ ಭಾರತೀಯ ಮೀನುಗಾರರನ್ನು ಪಾಕ್ ಅಧಿಕಾರಿಗಳು ಬಂಧಿಸಿದ್ದಾರೆ.

 ಬಂಧಿತ ಮೀನುಗಾರರು 9 ಲಾಂಚ್‌ಗಳಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರೆಂದು ಪಾಕಿಸ್ತಾನದ ಸಾಗರಸುರಕ್ಷತಾ ಏಜೆನ್ಸಿ (ಪಿಎಂಎಸ್‌ಎ) ತಿಳಿಸಿದೆ. ಲಾಂಚ್‌ಗಳನ್ನು ಕೂಡಾ ವಶಪಡಿಸಿಕೊಂಡಿರುವುದಾಗಿ ಅದು ಹೇಳಿದೆ.

ಬಂಧಿತ ಮೀನುಗಾರರನ್ನು ಬಂದರು ರಕ್ಷಣೆ ಇಲಾಖೆಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆಯೆಂಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News