ಬಿಜೆಪಿಯಿಂದ ಸ್ವಚ್ಛತೆ ಬಗ್ಗೆ ದಿವ್ಯ ನಿರ್ಲಕ್ಷ

Update: 2018-02-05 05:40 GMT

 ಬೆಂಗಳೂರು, ಫೆ.5: ರಾಜ್ಯ ಬಿಜೆಪಿ ಇಲ್ಲಿನ ಅರಮನೆ ಮೈದಾನದಲ್ಲಿ ರವಿವಾರ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಭಾಗದಿಂದ ಬಂದಿರುವ ಲಕ್ಷಾಂತರ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿಯ ಪರಿಕಲ್ಪನೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಮಾರಕವಾಗಿ ನಡೆದುಕೊಂಡಿದ್ದಾರೆ.

ಸಮಾವೇಶದ ಮರುದಿನವಾದ ಸೋಮವಾರ ಅರಮನೆಯ ಮೈದಾನದೆಲ್ಲೆಡೆ ಕಸದ ರಾಶಿ ಬಿದ್ದಿದೆ. ಊಟ-ತಿಂಡಿ ಮಾಡಿ ಬಿಸಾಡಿರುವ ಪ್ಲಾಸ್ಟಿಕ್ ತಟ್ಟೆ-ಬಟ್ಟಲುಗಳು, ಬಿಜೆಪಿಯ ಬಾವುಟ, ಧ್ವಜ ಹಾಗೂ ಟೋಪಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗಲಾಯಿತು.

ಸ್ವಚ್ಛತೆಯ ಬಗ್ಗೆ ಉದ್ದದ್ದ ಭಾಷಣ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನಕ್ಕ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಇನ್ನೊಂದೆಡೆ, ಸ್ವತಃ ಬಿಜೆಪಿ,ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ತನ್ನ ಕಾರ್ಯಕರ್ತರಿಗೆ ಪಾಠ ಹೇಳದೇ ದಿವ್ಯ ನಿರ್ಲಕ್ಷ ತೋರಿದಕ್ಕೆ ಅರಮನೆ ಮೈದಾನದಲ್ಲಿ ಬಿದ್ದುಕೊಂಡಿರುವ ಕಸದ ರಾಶಿಯೇ ಪ್ರತ್ಯಕ್ಷ ಸಾಕ್ಷಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News