ನ್ಯಾಯಾಧೀಶರಿಗೆ ಜೀವ ಬೆದರಿಕೆ; ಸುಪ್ರೀಂ ಕೋರ್ಟ್‌ನಲ್ಲೇ ವಾಸ!
Update: 2018-02-05 23:04 IST
ಮಾಲೆ, ಫೆ. 5: ಬಂಧಿತ ಪ್ರತಿಪಕ್ಷಗಳ ನಾಯಕರನ್ನು ಬಿಡುಗಡೆ ಮಾಡುವ ಹಾಗೂ ಸದಸ್ಯತ್ವ ಕಳೆದುಕೊಂಡ ಸಂಸದರ ಅಧಿಕಾರವನ್ನು ಮರಳಿಸಬೇಕೆಂಬ ತಮ್ಮ ಫೆಬ್ರವರಿ 1ರ ಅಭೂತಪೂರ್ವ ಆದೇಶದ ಬಳಿಕ ಬೆದರಿಕೆಗಳನ್ನು ಎದುರಿಸುತ್ತಿರುವ ಮಾಲ್ದೀವ್ಸ್ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ನಲ್ಲೇ ವಾಸಿಸುತ್ತಿದ್ದಾರೆ.
ಜೀವ ಬೆದರಿಕೆಗಳನ್ನು ಎದುರಿಸುತ್ತಿರುವ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ಆವರಣದಲ್ಲೇ ಬದುಕುತ್ತಿದ್ದಾರೆ.
ಈ ಬೆದರಿಕೆಗಳ ಮೂಲಗಳ ಬಗ್ಗೆ ತಿಳಿದಿಲ್ಲವಾದರೂ, ಸರಕಾರ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಹಿಂದೆ ಬಿದ್ದಿದೆ ಎನ್ನುವ ಸ್ಪಷ್ಟ ಸೂಚನೆಗಳಿವೆ.
ಆರೋಗ್ಯ ಸಚಿವ ರಾಜೀನಾಮೆ
ಬಂಧನದಲ್ಲಿರುವ ಪ್ರತಿಪಕ್ಷಗಳ ನಾಯಕರನ್ನು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸದ ಸರಕಾರದ ನಿಲುವನ್ನು ವಿರೋಧಿಸಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸರಕಾರಕ್ಕೆ ರಾಜೀನಾಮೆ ನೀಡಿರುವುದಾಗಿ ದೇಶದ ಆರೋಗ್ಯ ಸಚಿವ ಹುಸೈನ್ ರಶೀದ್ ಸೋಮವಾರ ಹೇಳಿದ್ದಾರೆ.