ಆನ್‌ಲೈನಲ್ಲಿ ಆರ್ಡರ್ ಮಾಡಿದ್ದು ಐಫೋನ್ ಬಂದಿದ್ದು ಡಿಟರ್ಜಂಟ್ ಸಾಬೂನ್

Update: 2018-02-05 18:45 GMT

ಮುಂಬೈನ ಸಾಫ್ಟ್‌ವೇರ್ ಇಂಜಿನಿಯರ್ ತಬ್ರೆಜ್ ಮೆಹಬೂಬ್ ನಗ್ರಾಲಿ, ಪ್ರತಿಷ್ಠಿತ ಆನ್‌ಲೈನ್ ಮಾರಾಟ ಕಂಪೆನಿಯೊಂದರಿಂದ ದುಬಾರಿ ಬೆಲೆಯ ಐಫೋನ್-8ನ್ನು ಆರ್ಡರ್ ಮಾಡಿದ್ದರು. ಅದರಂತೆ ಕ್ಲಪ್ತ ಸಮಯದಲ್ಲಿ ಪಾರ್ಸೆಲ್ ಕೂಡಾ ಬಂದಿತ್ತು. ಆದರೆ ಪೊಟ್ಟಣ ತೆರೆದು ನೋಡಿದಾಗ ಮೊಬೈಲ್‌ಫೋನ್ ಬದಲಿಗೆ ಬಟ್ಟೆತೊಳೆಯುವ ಸಾಬೂನನ್ನು ಕಂಡಾಗ ಪೆಚ್ಚಾಗುವ ಸರದಿ ಅವರದ್ದಾಗಿತ್ತು.
 ಕೂಡಲೇ ತಬ್ರೆಜ್, ಬೈಕುಲಾದ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರು. ತ್ವರಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಆನ್‌ಲೈನ್ ಶಾಪ್ಪಿಂಗ್ ಕಂಪೆನಿಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ತಬ್ರೆಜ್ ಅವರು ಆನ್‌ಲೈನ್‌ಶಾಪ್ಪಿಂಗ್ ಕಂಪೆನಿಗೆ ಅದರ ವೆಬ್‌ಸೈಟ್ ಮೂಲಕ ಐಫೋನ್ 8 ಮೊಬೈಲ್‌ಫೋನನ್ನು ಆರ್ಡರ್ ಮಾಡಿದ್ದರು. ಅದಕ್ಕಾಗಿ ಅವರು 55 ಸಾವಿರ ರೂ.ಗಳ ಪೂರ್ಣ ಹಣವನ್ನು ಪಾವತಿಸಿದ್ದರು. ಆದರೆ ಜನವರಿ 22ರಂದು ನವಿಮುಂಬೈನ ಪನ್ವೇಲ್‌ನಲ್ಲಿರುವ ಅವರ ಮನೆಗೆ ಬಂದ ಪಾರ್ಸೆಲ್‌ನಲ್ಲಿ ಮೊಬೈಲ್‌ಫೋನ್ ಬದಲಿಗೆ ಡಿಟರ್ಜನ್ ಸೋಪ್ ಇತ್ತೆಂದು ತಬ್ರೆಜ್ ದೂರಿನಲ್ಲಿ ಹೇಳಿದ್ದರು. ಆನ್‌ಲೈನ್‌ಶಾಪ್ಪಿಂಗ್ ಕಂಪೆನಿಯು ತನ್ನಿಂದ ಆಗಿರುವ ಪ್ರಮಾದವನ್ನು ಒಪ್ಪಿಕೊಂಡಿದ್ದು, ಆ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ