ಸುದೀರ್ಘ ಜೈಲುವಾಸದಿಂದ ನೆಲ್ಸನ್ ಮಂಡೇಲ ಬಿಡುಗಡೆ

Update: 2018-02-10 18:41 GMT

► 1809: ಅಮೆರಿಕದ ರಾಬರ್ಟ್ ಫುಲ್ಟನ್‌ರಿಗೆ ವಾಣಿಜ್ಯ ಉದ್ದೇಶದ ಸ್ಟೀಮ್‌ಬೋಟ್(ಆವಿ ದೋಣಿ) ಆವಿಷ್ಕಾರಕ್ಕೆ ಹಕ್ಕುಸ್ವಾಮ್ಯ ನೀಡಲಾಯಿತು.

► 1814: ನಾರ್ವೆ ದೇಶದ ಸ್ವಾತಂತ್ರ ಘೋಷಣೆ

► 1896: ಜಗತ್ಪ್ರಸಿದ್ಧ ನಾಟಕಕಾರ, ಕವಿ ಅಮೆರಿಕದ ಆಸ್ಕರ್ ವೈಲ್ಡ್‌ರ ‘ಸಲೋಮೆ’ ನಾಟಕ ಪ್ಯಾರಿಸ್‌ನಲ್ಲಿ ತನ್ನ ಪ್ರಥಮ ಪ್ರದರ್ಶನ ಕಂಡಿತು.

► 1929: ಇಟಲಿಯಲ್ಲಿ ಲ್ಯಾಟೆರಾನ್ ಒಪ್ಪಂದದ ಮೂಲಕ ವ್ಯಾಟಿಕನ್ ಸಿಟಿಯ ಸ್ವಾತಂತ್ರ ಹಾಗೂ ಸಾರ್ವಭೌಮತ್ವಕ್ಕೆ ಅಂಗೀಕಾರ ದೊರೆಯಿತು. *1944: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜರ್ಮನ್ ಪಡೆಗಳು ಇಟಲಿಯ ಅಪ್ರಿಲ್ಲಾ ಪ್ರದೇಶವನ್ನು ಮರು ವಶಪಡಿಸಿಕೊಂಡವು.

► 1953: ಸೋವಿಯತ್ ರಶ್ಯಾ ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು.

► 1970: ಜಪಾನ್ ದೇಶವು ಒಸುಮಿ ಎಂಬ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಉಪಗ್ರಹ ಉಡಾವಣೆ ಆರಂಭಿಸಿದ ನಾಲ್ಕನೇ ದೇಶವಾಯಿತು.

► 1971: ಅಮೆರಿಕ, ಇಂಗ್ಲೆಂಡ್, ಸೋವಿಯತ್ ರಶ್ಯಾ ಸೇರಿದಂತೆ 94 ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಸೀಬೆಡ್ ಒಪ್ಪಂದಕ್ಕೆ ಸಹಿ ಹಾಕಿದವು.

► 1978: ತತ್ವಜ್ಞಾನಿ ಅರಿಸ್ಟಾಟಲ್, ಕವಿ ಶೇಕ್ಸ್‌ಪಿಯರ್ ಹಾಗೂ ಕಾದಂಬರಿಕಾರ ಡಿಕೆನ್ಸ್‌ರ ಕೃತಿಗಳ ಮೇಲೆ ಚೀನಾ ನಿರ್ಬಂಧ ಹೇರಿತು.

► 1990: ಆಫ್ರಿಕಾದ ಗಾಂಧಿ ಎಂದು ಹೆಸರಾಗಿದ್ದ ಜನಾಂಗೀಯ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ 27 ವರ್ಷಗಳ ಸುದೀರ್ಘ ಜೈಲುವಾಸದಿಂದ ಬಿಡುಗಡೆಗೊಂಡರು.

► 1968: ಬಿಜೆಪಿ, ಆರೆಸ್ಸೆಸ್ ಮುಖಂಡ ದೀನ ದಯಾಳ್ ಉಪಾಧ್ಯಾಯ ನಿಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News