×
Ad

ಮಾಲ್ ನಲ್ಲಿ ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿ

Update: 2018-02-11 23:03 IST

ಬೀಜಿಂಗ್,ಫೆ.11: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಮಾಲ್ ಒಂದರಲ್ಲಿ ಯುವಕನೊಬ್ಬ ಚಾಕುವಿನಿಂದ ಜನರಿಗೆ ಮನಬಂದಂತೆ ಇರಿದಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಹಾಗೂ ಇತರ 12 ಮಂದಿ ಗಾಯಗೊಂಡಿದ್ದಾರೆ.

ಬೀಜಿಂಗ್‌ನ ಕ್ಸಿಡಾನ್ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಗಾಯಗೊಂಡ ಮೂವರು ಪುರುಷರು ಹಾಗೂ 10 ಮಂದಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿದುಬಂದಿದೆ.

 ಘಟನೆ ನಡೆದ ತಕ್ಷಣವೇ ಪೊಲೀಸರು ಯುಕನನ್ನು ಬಂಧಿಸಿದ್ದು, ಆತನನ್ನು 35 ವರ್ಷದ ಹೆನಾನ್ ಪ್ರಾಂತದ ನಿವಾಸಿ ಝು ಎಂದು ಗುರುತಿಸಿದ್ದಾರೆ. ಬಂಧಿತನು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಹಾಗೂ ತನ್ನ ‘ಅಸಮಾಧಾನ’ವನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ದಾಳಿಯನ್ನು ನಡೆಸಿರುವುದಾಗಿ ಆತ ಹೇಳಿದ್ದಾನಾದರೂ ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News