ಏಕಾಂಗಿ ಪಯಣಿಗರ ರಕ್ಷಣೆಗೆ ‘ಸೇಫ್ ಟ್ರಾವೆಲ್’

Update: 2018-02-11 18:22 GMT

ರ್ಜೀನಿಯಾದ ಹೆರ್ನ್‌ಡೋನ್‌ನಲ್ಲಿರುವ ತನ್ನ ಮನೆಯಿಂದ ಶಾಲೆಗೆ ಹೋಗುವಾಗ ಹಾಗೂ ಬರುವಾಗ ಶಾಲಾ ಬಸ್ ಇಳಿದು 20 ನಿಮಿಷಗಳ ಕಾಲ ನಡೆಯಬೇಕಿತ್ತು. ಈ ಸಂದರ್ಭ ಒಂಟಿಯಾಗಿ ನಡೆಯಲು ಆತಂಕವಾಗುತ್ತಿತ್ತು ವಿಶೇಷವಾಗಿ ಚಳಿಗಾಲದಲ್ಲಿ. ಈ ಸಂದರ್ಭ ಮುಂಜಾನೆ ಮಂಜು ಕವಿದು ನಸು ಕತ್ತಲು ಇರುತ್ತಿತ್ತು. ಶಿಕ್ಷಣ ಪೂರೈಸಿದ ಬಳಿಕ ಶಾಲಾ ದಿನಗಳ ಸಂದರ್ಭ ಎದುರಿಸಿದ ಆತಂಕದ ಅರಿವಿತ್ತು. ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದಾಗ ಕೂಡ ಈ ಆತಂಕ ಮುಂದುವರಿದಿತ್ತು. ಹಾಗಾಗಿ ತನಗೆ ಸಮಸ್ಯೆ ಇದೆ. ಇದನ್ನು ಹೇಗಾದರೂ ಮಾಡಿ ಪರಿಹರಿಸಿಕೊಳ್ಳಬೇಕು ಎಂದು ಮೇಧಾ ನಿರ್ಧರಿಸಿದರು. ಇರ ಪ್ರತಿಫಲವೇ ‘ಸೇಫ್ ಟ್ರಾವಲ್’.

ಏಕಾಂಗಿಯಾಗಿ ಪ್ರಯಾಣಿಸುವರಿಗಾಗಿ ಮೇಧಾ ಈ ಆ್ಯಪ್ ರೂಪಿಸಿದ್ದಾರೆ. ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಲು ಸಾಧ್ಯವಾಗದ ಸಂದರ್ಭ ವ್ಯಕ್ತಿ ತನ್ನ ನಂಬಿಗಸ್ಥನಿಗೆ ಮಾಹಿತಿ ರವಾನಿಸಲು ಸಾಧ್ಯವಾಗುವಂತೆ ಮೊಬೈಲ್‌ನಲ್ಲಿ ಪ್ರೋಗ್ರಾಮ್ ರೂಪಿಸುವಂತೆ ಮೇಧಾ ಈ ಆ್ಯಪ್ ರೂಪಿಸಿದ್ದಾರೆ.

ತಾನು ರೂಪಿಸಿದ ಆ್ಯಪ್ ಬಗ್ಗೆ ಮೇಧಾಗೆ ಉತ್ತಮ ಭರವಸೆ ಏನೂ ಇರಲಿಲ್ಲ. ಆದರೆ ವಾರ್ಷಿಕ ಆ್ಯಪ್ ಚಾಲೆಂಜ್ ಸ್ಪರ್ಧೆಯಲ್ಲಿ ಈ ಆ್ಯಪ್ ತೀರ್ಪುಗಾರರ ಗಮನ ಸೆಳೆಯಿತು ಹಾಗೂ ವರ್ಜೀನಿಯಾದ 10 ಜಿಲ್ಲೆಗಳಲ್ಲಿ ಆಯ್ಕೆಯಾಯಿತು.
‘ಮೇಧಾ ರೂಪಿಸಿದ ಆ್ಯಪ್ ಆಯ್ಕೆಯಾಗಿ ಇರುವುದು ನಮಗೆ ಸಂತಸ ತಂದಿದೆ ’ ಎಂದು ಮೇಧಾ ಅವರ ತಂದೆ ಹಾಗೂ ಕಂಪ್ಯೂಟರ್ ಇಂಜಿನಿಯರ್ ಮನಮೋಹನ್ ಗುಪ್ತಾ ಹೇಳಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ