ಭಾರತದ ಆಕ್ರಮಣಕ್ಕೆ ಸೂಕ್ತ ಪ್ರತಿಕ್ರಿಯೆ: ಪಾಕ್ ರಕ್ಷಣಾ ಸಚಿವ ಎಚ್ಚರಿಕೆ

Update: 2018-02-13 17:22 GMT

ಇಸ್ಲಾಮಾಬಾದ್, ಫೆ. 13: ಕಾಶ್ಮೀರದ ಸೇನಾ ಶಿಬಿರವೊಂದರ ಮೇಲೆ ನಡೆದ ದಾಳಿಗೆ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ ಎಂಬ ಭಾರತದ ಹೇಳಿಕೆಗೆ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖುರ್ರಂ ದಸ್ತಗಿರ್ ಖಾನ್, ಭಾರತದ ಯಾವುದೇ ದುಸ್ಸಾಹಸಕ್ಕೆ ‘‘ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಲಾಗುವುದು’’ ಎಂದು ಹೇಳಿದ್ದಾರೆ.

ಭಾರತೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಖಾನ್, ‘‘ಯಾವುದೇ ಪುರಾವೆಯಿಲ್ಲದೆ ಪಾಕಿಸ್ತಾನವನ್ನು ದೂರುವ ತನ್ನ ಸ್ವಭಾವ’’ವನ್ನು ಭಾರತ ಬಿಡಬೇಕು ಎಂದಿದ್ದಾರೆ.

‘‘ಭಾರತ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಪಾಕಿಸ್ತಾನ ಅದರದೇ ಭಾಷೆಯಲ್ಲಿ ಉತ್ತರ ನೀಡುತ್ತದೆ. ಭಾರತದ ಯಾವುದೇ ಆಕ್ರಮಣ ಅಥವಾ ದುಸ್ಸಾಹಸಕ್ಕೆ ಅದರ ಪ್ರಮಾಣ, ವಿಧಾನ ಮತ್ತು ಸ್ಥಳ ಯಾವುದಿದ್ದರೂ ಪ್ರತೀಕಾರ ತೀರಿಸದೆ ನಾವು ಬಿಡುವುದಿಲ್ಲ. ಹಾಗೂ ಅದಕ್ಕೆ ತಕ್ಕ ಪ್ರಮಾಣದಲ್ಲಿ ಪ್ರತಿಕ್ರಿಯಿಸಲಾಗುವುದು’’ ಎಂದು ಹೇಳಿಕೆಯೊಂದರಲ್ಲಿ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News