2019ರ ಅಮೆರಿಕ ಬಜೆಟ್‌ನಲ್ಲಿ ಪಾಕ್ ನೆರವು ಇನ್ನೂ ಕಡಿತ

Update: 2018-02-13 17:26 GMT

ವಾಶಿಂಗ್ಟನ್, ಫೆ. 13: ಅಮೆರಿಕವು ತನ್ನ ಒಂದು ಕಾಲದ ಮಿತ್ರ ಪಾಕಿಸ್ತಾನಕ್ಕೆ ನೀಡುತ್ತಿರುವ ಸೇನಾ ನೆರವನ್ನು 2019ರ ಬಜೆಟ್‌ನಲ್ಲಿ ಇನ್ನಷ್ಟು ಕಡಿತಗೊಳಿಸಲು ಸಜ್ಜಾಗಿದೆ.

ವಿದೇಶಾಂಗ ಇಲಾಖೆ ಮೂಲಕ ನೀಡಲಾಗುವ ನೆರವು ಪ್ರಮಾಣದಲ್ಲಿ 10 ಮಿಲಿಯ ಡಾಲರ್ (ಸುಮಾರು 64 ಕೋಟಿ ರೂಪಾಯಿ)ನಷ್ಟು ಕಡಿತ ಆಗಿರುವುದನ್ನು ಬಜೆಟ್ ತೋರಿಸಿದೆ. ಈಗ ಪಾಕಿಸ್ತಾನಕ್ಕೆ ಅಮೆರಿಕ ನೀಡಲು ಉದ್ದೇಶಿಸಿರುವ ನೆರವು ಮೊತ್ತ 351 ಮಿಲಿಯ ಡಾಲರ್ (ಸುಮಾರು 2,255 ಕೋಟಿ ರೂಪಾಯಿ) ಆಗಿದೆ.

 ಈ ವಿಷಯವನ್ನು ವಿದೇಶಾಂಗ ಇಲಾಖೆಯ ವಕ್ತಾರ ಹರಿ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ವೇತಭವನವು ತನ್ನ 2019ರ ಹಣಕಾಸು ವರ್ಷದ ಬಜೆಟನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ನೀಡಲಾಗುವ ಅನುದಾನದಲ್ಲಿ ಬೃಹತ್ ಕಡಿತವನ್ನು ಪ್ರಸ್ತಾಪಿಸಲಾಗಿದೆ.

ಅಮೆರಿಕದಿಂದ ಸೇನಾ ಸಲಕರಣೆಗಳನ್ನು ಖರೀದಿಸಲು ದೇಶವೊಂದಕ್ಕೆ ನೀಡಲಾಗುವ ಮೊತ್ತವನ್ನೂ 80 ಮಿಲಿಯ ಡಾಲರ್ (514 ಕೋಟಿ ರೂಪಾಯಿ)ಗೆ ತಗ್ಗಿಸಲಾಗಿದೆ. 2018ರಲ್ಲಿ ಈ ಮೊತ್ತ 100 ಮಿಲಿಯ ಡಾಲರ್ (642 ಕೋಟಿ ರೂಪಾಯಿ) ಆಗಿತ್ತು. 2012ರಲ್ಲಿ 296 ಮಿಲಿಯ ಡಾಲರ್ (1902 ಕೋಟಿ ರೂಪಾಯಿ) ಆಗಿದ್ದ ಈ ಮೊತ್ತ ಕ್ರಮೇಣ ಕಡಿತಗೊಳ್ಳುತ್ತಾ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News