ದಕ್ಷಿಣ ಆಫ್ರಿಕದ ಸ್ಟಾರ್ ಕ್ರಿಕೆಟಿಗರಿಗೆ ವಿಶ್ರಾಂತಿ

Update: 2018-02-13 18:42 GMT

ಜೋಹಾನ್ಸ್‌ಬರ್ಗ್, ಫೆ.13: ಭಾರತ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ದಕ್ಷಿಣ ಆಫ್ರಿಕದ ಸ್ಟಾರ್ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ರವಿವಾರ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಮೊದಲ ಟ್ವೆಂಟಿ-20 ಪಂದ್ಯ ನಡೆಯಲಿದೆ. ಟೆಸ್ಟ್ ತಂಡದ ಹಲವು ಮಂದಿ ಟ್ವೆಂಟಿ-20 ತಂಡದಿಂದ ಹೊರಗುಳಿಯಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಜೆ.ಪಿ.ಡುಮಿನಿ ತಂಡದ ನಾಯಕರಾಗಿದ್ದಾರೆ.ಆದರೆ ಅವರ ತಂಡದಲ್ಲಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಇದ್ದಾರೆ.

ಟ್ವೆಂಟಿ-20 ಸರಣಿ ಪೂರ್ಣಗೊಳ್ಳುವ ಹೊತ್ತಿಗೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಗೆ ತಂಡದ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ. ಮಾರ್ಚ್ 1ರಂದು ಟೆಸ್ಟ್ ಸರಣಿ ಆರಂಭವಾಗಲಿದೆ. ಉಪನಾಯಕ ಎಫ್‌ಡು ಪ್ಲೆಸಿಸ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಫ್ರಿಕ ತಂಡದ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್‌ಗೆ ವಿಶ್ರಾಂತಿ ನೀಡಲಾಗಿದೆ. ಲಿಂಡಾ ರೊಂಡಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗ ಪ್ರವೇಶಿಸದ ಕ್ರಿಸ್ಟಿಯನ್ ಜಾಂಕರ್ , ವೇಗದ ಬೌಲರ್ ಜೂನಿಯರ್ ದಾಲಾ ಅವಕಾಶ ಪಡೆದಿದ್ದಾರೆ.

►ಆಫ್ರಿಕದ ಟ್ವೆಂಟಿ-20 ತಂಡ: ಜೆ.ಪಿ.ಡುಮಿನಿ (ನಾಯಕ), ಫರ್ಹಾನ್ ಬೆಹರ್ದಿನ್,ಜೂನಿಯರ್ ದಾಲಾ, ಎಬಿ ಡಿವಿಲಿಯರ್ಸ್‌, ರೀಝಾ ಹೆನ್ರಿಕ್ಸ್, ಕ್ರಿಶ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಕ್ರಿಸ ಮೊರೀಸ್,ಡೇನ್ ಪ್ಯಾಟರ್ಸನ್, ಆ್ಯರನ್ ಫಾಂಗಿಸೊ, ಆ್ಯಂಡ್ಲೆ ಫೆಹ್ಲುಕ್ವಾಯೊ, ತಾಬ್‌ರೈಝ್ ಶಂಸಿ, ಜಾನ್ ಸ್ಸುಮುಟ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News