ಬಟವಾಡೆಯಾಗದ ಅರ್ಧ ಟನ್‌ಪತ್ರಗಳು!

Update: 2018-02-14 18:56 GMT

ಬದ್ಧತೆ ಹೊಂದಿರದ ದೇಶದ ಅಂಚೆ ಸೇವೆ ಬಗ್ಗೆ ಇಟಾಲಿಯನ್ನರು ಸಿಕ್ಕಾಬಟ್ಟೆ ಖಿನ್ನರಾಗಿದ್ದರೆ. ಇದಕ್ಕೆ ಕಾರಣನಾದ ಅಪರಾಧಿ ಕೊನೆಗೂ ಸಿಕ್ಕಿದ್ದಾನೆ. ಅಂಚೆ ವಿತರಕನ ಗ್ಯಾರೇಜ್ ಒಂದರಲ್ಲಿ ಬಟವಾಡೆಯಾಗದ ಅರ್ಧ ಟನ್ ಕಾಗದ ಪತ್ರಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
56 ಹರೆಯದ ಈ ಅಂಚೆ ವಿತರಕನ ಮನೆಯಲ್ಲಿ ರಹಸ್ಯವಾಗಿ ದಾಸ್ತಾನು ಇರಿಸಲಾಗಿದ್ದ 573 ಕಿ. ಗ್ರಾಂ. ಪತ್ರಗಳನ್ನು ಅಂಚೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಟಲಿಯಲ್ಲಿ ವಶಪಡಿಸಿಕೊಳ್ಳಲಾದ ಅತ್ಯಧಿಕ ಪತ್ರ ಸಂಗ್ರಹ ಇದಾಗಿದೆ.
ಕಳೆದ 8 ವರ್ಷಗಳಿಂದ ಪತ್ರಗಳನ್ನು ಬಟವಾಡೆ ಮಾಡದೆ ದಾಸ್ತಾನು ಇರಿಸಲಾಗಿತ್ತು. ಈ ಪತ್ರಗಳು ಬಳಕೆದಾರರ ಬಿಲ್, ಬ್ಯಾಂಕ್ ಸ್ಟೇಟ್‌ಮೆಂಟ್, ಹಳೆಯ ಫೋನ್ ಪುಸ್ತಕ, 2010ರ ಸ್ಥಳೀಯ ಚುನಾವಣೆಯ ಪ್ರಣಾಳಿಕೆಗಳನ್ನು ಒಳಗೊಂಡಿದೆ.
ಪತ್ರಗಳನ್ನು ಹೊಂದಿರುವ 25 ದೊಡ್ಡ ಕಂಟೈನರ್‌ಗಳನ್ನು ಅಂಚೆ ಸೇವೆಯಿಂದ ಸ್ವೀಕರಿಸಲಾಗಿದೆ ಎಂದು ಮರು ಬಳಕೆ ಕೇಂದ್ರದ ಸಿಬ್ಬಂದಿಯೋರ್ವ ನೀಡಿದ ಮಾಹಿತಿ ಹಿನ್ನೆಲೆುಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ನ್ಯೂ ನ್ಯೂಯಾರ್ಕ್ ನಗರದ ಉದಾಹರಣೆ ಯನ್ನು ಹೇಳುವುದಾದರೆ, ಬ್ರೂಕ್ಲಿನ್‌ನ ಫ್ಲಾಟ್‌ಬಶ್ ವಿಭಾಗದ ಅಂಚೆ ವಿತರಕನೋರ್ವ ದಶಕಗಳಿಂದ 40 ಸಾವಿರ ಅಂಚೆ ಪತ್ರಗಳನ್ನು ತನ್ನ ಮನೆ, ಕಾರು ಹಾಗೂ ಕೆಲಸದ ಸ್ಥಳದ ಲಾಕರ್‌ಗಳಲ್ಲಿ ಇರಿಸಿರುವುದಾಗಿ 2014ರಲ್ಲಿ ಆರೋಪಕ್ಕೆ ಒಳಗಾಗಿದ್ದ. ಆದರೆ, ಆನಂತರ ಫೆಡರಲ್ ನ್ಯಾಯವಾದಿ ಅಂಚೆ ಪಾಲಕನ ಮೇಲಿನ ಈ ಆರೋಪವನ್ನು ನಿರಾಕರಿಸಿದ್ದರು.
 ಕಳೆದ ವರ್ಷ 1,800ಕ್ಕೂ ಅಧಿಕ ಪತ್ರ ಹಾಗೂ ಪಾರ್ಸೆಲ್‌ಗಳನ್ನು ವಶದಲ್ಲಿ ಇರಿಸಿಕೊಂಡಿರುವುದಾಗಿ ಹಾಗೂ ಬಟವಾಡೆ ಮಾಡಲು ವಿಳಂಬಿಸಿರುವು ದಾಗಿ ಉತ್ತರ ಕರೋಲಿನಾದ 53 ವರ್ಷದ ಗ್ರೇ ಕೊಲಿನ್ಸ್ ತಪ್ಪೊಪ್ಪಿಕೊಂಡಿದ್ದ ಎಂದು ರಾಷ್ಟ್ರದ ಪಶ್ಚಿಮ ಜಿಲ್ಲೆಯ ಅಮೆರಿಕದ ಅಟಾರ್ನಿ ಅಧಿಕಾರಿ ತಿಳಿಸಿದ್ದ. 22 ಸಾವಿರ ಅಂಚೆ ಪಾರ್ಸೆಲ್‌ಗಳನ್ನು ರಹಸ್ಯವಾಗಿ ಇರಿಸಿದ್ದ ಆರೋಪಕ್ಕೆ 2005ನೇ ವರ್ಷ ಅಂಚೆ ವಿತರಕ ಬ್ರುಟಾಕೊ ವಿರುದ್ಧ ಆರೋಪ ದಾಖಲಿಸಲಾಗಿತ್ತು ಎಂದು ಎನ್‌ಬಿಸಿ ಫಿಲಡೇಲ್ಫಿಯಾ ವರದಿ ತಿಳಿಸಿದೆ.
 ಪತ್ರ ಸರಿಯಾದ ಮಾಲಕರಿಗೆ ಕೆಲವು ವರ್ಷಗಳ ಬಳಿಕವೇ ಪತ್ರ ತಲುವುದು ಈಗ ಇಟಲಿಯ ಅಂಚೆ ನೀತಿ ಆದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ