ಮುಂಗೋಪಿ ಬೆಕ್ಕಿಗೆ 700,000 ಡಾಲರ್ ಪರಿಹಾರ!

Update: 2018-02-14 18:56 GMT

ಚಿತ್ರ ಬಳಕೆಯ ಆರೋಪದ ಪ್ರಕರಣವೊಂದಕ್ಕೆ ಸಂಬಂಧಿಸಿ ಕ್ಯಾಲಿಫೋರ್ನಿಯಾದ ನ್ಯಾಯಾಲಯದ ನ್ಯಾಯಾಧೀಶರು ‘ಗ್ರಂಪಿ ಕ್ಯಾಟ್’ಗೆ 700,000 ಡಾಲರ್ ನೀಡುವಂತೆ ಘೋಷಿಸಿ ತೀರ್ಪು ನೀಡಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಮೊತ್ತದ ಪರಿಹಾರ ಧನ ಪಡೆದವರು ಯಾರೆಂದರೆ ಒಂದು ಬೆಕ್ಕು.
ಬೆಕ್ಕಿನ ಒಡತಿಯಾದ ಅರಿಜೋನಾದ ಮೋರ್ರಿಸ್‌ಟೌನ್‌ನ ಟವಾತಾ ಬಂಡ್ಸೀನ್ ಅವರು ಗ್ರೆನೆಡ್ ಬಿವರೇಜ್ ಕಂಪೆನಿ ತನ್ನ ಬೆಕ್ಕಿನ ಚಿತ್ರವನ್ನು ಅನಧಿಕೃತವಾಗಿ ಬಳಕೆ ಮಾಡಿಕೊಂಡ ಕುರಿತು ಮೂರು ವರ್ಷಗಳ ಹಿಂದೆ ದಾವೆ ಸಲ್ಲಿಸಿದ್ದರು. ಈ ಪ್ರಕರಣದ ತೀರ್ಪು ಈಗ ಹೊರಬಿದ್ದಿದೆ.
ಮಾಲಕಿ ‘ಗ್ರಂಪಿ ಕ್ಯಾಟ್ ಗ್ರಂಪುಕ್ಸಿನೊ’ ಉತ್ಪನ್ನದ ಜಾಹೀರಾತಿಗೆ ಬೆಕ್ಕನ್ನು ಬಳಸಲು ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಆದರೆ, ಕಂಪೆನಿ ತನ್ನ ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೂಡ ಈ ಬೆಕ್ಕಿನ ಚಿತ್ರ ಬಳಸಿಕೊಂಡಿದೆ. ಇದನ್ನು ನ್ಯಾಯಧೀಶರು ಕಂಡುಕೊಂಡಿದ್ದಾರೆ. ಅಂತೂ ಬೆಕ್ಕಿನ ಹೆಸರಲ್ಲಿ ಬೆಕ್ಕಿನ ಮಾಲಕಿಗೆ ಒಂದಷ್ಟು ಹಣ ಕೈಸೇರುವಂತಾಯಿತು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ